ಉಡುಪಿ, ಸೆ 28 (DaijiworldNews/HR): ಕೃಷಿ ಮಸೂದೆ ರೈತ ವಿರೋಧಿ ಎಂದು ಆರೋಪಿಸಿ ಕರ್ನಾಟಕ ಬಂದ್ ನಡೆಸುತ್ತಿದ್ದು, ಉಡುಪಿಯಲ್ಲಿ ರಸ್ತೆ ತಡೆಗೆ ಯತ್ನಿಸಿದ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದ್ದಾರೆ.









ಬಂದ್ ಗೆ ಕರೆ ನೀಡಿದ್ದರೂ, ಬಸ್ ಸಂಚಾರ ಎಂದಿನಂತೆ ಇದ್ದ ಕಾರಣ ಸಂಘಟನೆಗಳು ಬಸ್ ಬಂದ್ ಮಾಡಲು ಮನವಿ ಮಾಡಿದರು. ಆದರೆ ಇದು ಪ್ರಯೋಜನವಾಗದೇ ಇದ್ದ ಕಾರಣ ರಸ್ತೆ ತಡೆ ಮಾಡಲು ಮುಂದಾಗಿದ್ದು, ಉಡುಪಿ ಸಿಟಿ ಬಸ್ ನಿಲ್ದಾಣದಲ್ಲಿ ಕುಳಿತು ಸರ್ಕಾರ ವಿರುದ್ಧ ಪ್ರತಿಭಟಣಾಕಾರರು ಘೋಷಣೆ ಕೂಗಿದರು.
ರಸ್ತೆ ತಡೆಗೆ ಯತ್ನಿಸಿದ ಒಟ್ಟು 21 ಮಂದಿ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.