ಉಳ್ಳಾಲ, ಸೆ. 28 (DaijiworldNews/SM): ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬೋಳಿಯಾರ್, ಮಂಜನಾಡಿ, ಉಳ್ಳಾಲ, ಕೋಟೆಕಾರು ಪಂಚಾಯತ್ ವ್ಯಾಪ್ತಿಯಲ್ಲಿ ಸೋಮವಾರ ಕೋವಿಡ್-19 ಉಚಿತ ಪರೀಕ್ಷಾ ಶಿಬಿರ ನಡೆದಿದ್ದು ರ್ಯಾಂಡಮ್ ಆ್ಯಂಟಿಜನ್ ಟೆಸ್ಟ್ ನಲ್ಲಿ ಒಟ್ಟು 81 ಜನರು ಭಾಗವಹಿಸಿದ್ದು, ಇವರಲ್ಲಿ 11 ಮಂದಿಗೆ ಸೋಂಕು ದೃಡವಾಗಿದೆ.

ಮಂಜನಾಡಿ ಪಂಚಾಯತ್ ವ್ಯಾಪ್ತಿಯ ಕಲ್ಕಟ್ಟದಲ್ಲಿ 32 ಜನರು ಕೋವಿಡ್ ಟೆಸ್ಟ್ ಗೆ ಒಳಗಾಗಿದ್ದು, ಒಬ್ಬರಿಗೆ ಸೋಂಕು ದೃಢವಾದರೆ, ಬೋಳಿಯಾರ್ ನಲ್ಲಿ 19 ಜನರು ಭಾಗವಹಿಸಿದ್ದು ಆವರಲ್ಲಿ 7 ಮಂದಿಗೆ ಸೋಂಕು ದೃಡವಾಗಿದೆ. ಉಳ್ಳಾಲದಲ್ಲಿ 50 ಜನರು ಪರೀಕ್ಷೆಯಲ್ಲಿ ಭಾಗವಹಿಸಿದ್ದು ಇಬ್ಬರಿಗೆ ಸೋಂಕು ದೃಢವಾದರೆ ಕಿನ್ಯ ಗ್ರಾಮ ಫಂಚಾಯತ್ ವ್ಯಾಪ್ತಿಯಲ್ಲಿ 29 ಜನರು ಭಾಗವಹಿಸಿದ್ದು ಎಲ್ಲರಿಗೂ ನೆಗೆಟಿಬ್ ವರದಿ ಬಂದಿದೆ.
ಮಂಗಳವಾರ ಕೊಣಾಜೆ ಗ್ರಾಮ ಪಂಚಾತ್ ವ್ಯಾಪ್ತಿಯ ಅಸೈಗೋಳಿಯ ಲಯನ್ಸ್ ಕ್ಲಬ್ ಪಾವೂರು ಪಂಚಾಯತ್ ವ್ಯಾಪ್ತಿಯ ಪಾವೂರು ಅಂಬೇಡ್ಕರ್ ಭವನದಲ್ಲಿ ಉಳ್ಳಾಲದ ವ್ಯಾಪ್ತಿಯ ಕಲ್ಲಾಪು ಪ್ರದೇಶ, ತಲಪಾಡಿ ಪಂಚಾಯತ್ ವ್ಯಾಪ್ತಿಯಲ್ಲಿ ತಪಾಸಣೆ ನಡೆಯಲಿದೆ.