ಮಲ್ಪೆ, ಸೆ. 28 (DaijiworldNews/SM): ಇಲ್ಲಿನ ಕೆಮ್ಮಣ್ಣುವಿನ ಯಡಬೆಟ್ಟುನಲ್ಲಿ ಮನೆಯೊಂದರಲ್ಲಿ ವ್ಯಕ್ತಿಯೊಬ್ಬರು ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ನಡೆದಿದೆ. ಶೇಖರ ಪೂಜಾರಿ(55) ಮೃತ ವ್ಯಕ್ತಿಯಾಗಿದ್ದಾರೆ.

ವ್ಯಕ್ತಿ ಮೃತಪಟ್ಟು 40 ದಿನಗಳು ಕಳೆದಿರಬಹುದೆಂದು ಅಂದಾಜಿಸಲಾಗಿದೆ. ಇವರು ಮುಂಬೈಯಲ್ಲಿ ಹೋಟೆಲ್ ಉದ್ಯೋಗದಲ್ಲಿದ್ದ, ಲಾಕ್ ಡೌನ್ ಸಮಯದಲ್ಲಿ ಕೆಲಸ ಕಳೆದುಕೊಂಡು ಊರಿಗೆ ಬಂದು, ಕೂಲಿ ಕೆಲಸ ಮಾಡಿಕೊಂಡು ಒಂಟಿಯಾಗಿ ಮನೆಯಲ್ಲಿ ಜೀವನ ನಡೆಸುತ್ತಿದ್ದ, ಕುಡಿತದ ಚಟವು ಮೃತವ್ಯಕ್ತಿಗೆ ಇತ್ತೆಂಬ ಮಾಹಿತಿಯು ಸ್ಥಳಿಯರಿಂದ ತಿಳಿದುಬಂದಿದೆ.
ಉಡುಪಿಯಲ್ಲಿ ಕೆಲವು ದಿನಗಳ ಹಿಂದೆ ಸುರಿದ ಮಳೆಯಿಂದ ಪರಿಸರದಲ್ಲಿ ಬಹಳಷ್ಟು ಮನೆಗಳು ನೆರೆಗೆ ತುತ್ತಾಗಿದ್ದವು. ಮನೆ ಹಾನಿಯ ಪರಿಶೀಲಿಸಲು ಹೋದವರಿಗೆ ಈ ಘಟನೆ ಕಂಡುಬಂದಿದೆ. ಮಲ್ಪೆ ಠಾಣಾಧಿಕಾರಿ ತಿಮ್ಮೇಶ್ ಬಿ.ಎನ್ ಹಾಗೂ ಸಿಬ್ಬಂದಿಗಳಾದ ರಾಘವೇಂದ್ರ ಬಿ.ಕೆ, ಜಗದೀಶ್ ಕಾನೂನು ಪ್ರಕ್ರಿಯೆ ನಡೆಸುವಾಗ ಸ್ಥಳದಲ್ಲಿ ಹಾಜರಿದ್ದರು. ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ಕಳೇಬರವನ್ನು ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯ ಶವಗಾರಕ್ಕೆ ಸಾಗಿಸಲು, ಉಚಿತ ಅಂಬುಲೇನ್ಸ್ ಸೇವೆಯನ್ನು ನೀಡಿ ಸಹಕರಿಸಿದರು.