ಮೇ, 14: ಮತದಾನದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಜಾಗೃತಿ ಮೂಡಿಸಿದ್ದ ನಟಿ ರಮ್ಯಾ ಹಾಗೂ ರಾಜ್ಯದಾದ್ಯಂತ ‘ಜಸ್ಟ್ ಅಸ್ಕಿಂಗ್’ (#justasking) ಮೂಲಕ ಪ್ರಧಾನಿ ನರೇಂದ್ರ ಮೋದಿ ಪ್ರಶ್ನಿಸುತ್ತಿದ್ದ ಹಾಗೂ ಟೀಕಿಸುತ್ತಿದ್ದ ನಟ ಪ್ರಕಾಶ್ ರೈ ಅವರು ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಮೇ 12ರಂದು ಮತ ಚಲಾಯಿಸದ ಕಾರಣಕ್ಕೆ ಟ್ವಿಟರ್ನಲ್ಲಿ ತೀವ್ರ ಆಕ್ರೋಶಕ್ಕೆ ತುತ್ತಾಗಿದ್ದಾರೆ. ಮತದಾರರ ಪಟ್ಟಿ ಪರಿಷ್ಕರಣೆ ಸಂದರ್ಭದಲ್ಲಿ ಬೆಂಗಳೂರಿನ 10ನೇ ವಾರ್ಡ್ನ ಮತದಾರರ ಪಟ್ಟಿಯಲ್ಲಿ, 420 ಕ್ರಮ ಸಂಖ್ಯೆಯಲ್ಲಿ ಎಐಸಿಸಿ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆ ರಮ್ಯಾ ಅವರ ಹೆಸರಿತ್ತು. ವಿದ್ಯಾನಗರದ ಪಿಎಲ್ಡಿ ಬ್ಯಾಂಕ್ ಮತಗಟ್ಟೆಯಲ್ಲಿ ರಮ್ಯಾ ಮತ ಚಲಾವಣೆ ಮಾಡಬೇಕಿತ್ತು. ನಟಿ ರಮ್ಯಾ ಹಾಗೂ ನಟ ಪ್ರಕಾಶ್ ರೈ ಅವರನ್ನು ಟೀಕಿಸಿ, ನಾಟ್ ವೋಟೆಡ್ (#NotVoted) ಹ್ಯಾಷ್ ಟ್ಯಾಗ್ ವೈರಲ್ ಆಗಿದೆ.