ಮಂಗಳೂರು, ಸೆ. 29 (DaijiworldNews/MB) : ಡ್ರಗ್ಸ್ ದಂಧೆ ಪ್ರಕರಣಕ್ಕೆ ಸಂಬಂಧಿಸಿ ಡ್ಯಾನ್ಸರ್ ಕಿಶೋರ್ ಅಮನ್ ಶೆಟ್ಟಿ ಹಾಗೂ ಅಕೀಲ್ ನೌಶೀಲ್ನ್ನು ಬಂಧಿಸಿದ ಬಳಿಕ ಡ್ರಗ್ ಪೆಡ್ಲರ್ಗಳಿಗೆ ಬಲೆ ಬೀಸುತ್ತಲ್ಲೇ ಇರುವ ಮಂಗಳೂರು ಸಿಸಿಬಿ ಪೊಲೀಸರು ಇದೀಗ ಮತ್ತೆ ಬೆಂಗಳೂರಿನಲ್ಲಿ ಇಬ್ಬರು ಡ್ರಗ್ ಪೆಡ್ಲರ್ಗಳನ್ನು ಬಂಧಿಸಿದ್ದಾರೆ.

ಮುಂಬೈನಲ್ಲಿ ತಲೆಮರೆಸಿಕೊಂಡಿದ್ದ ಮಂಗಳೂರಿನ ಬಂದರು ಮೂಲದ ನಿವಾಸಿ ಪೆಡ್ಲರ್ ಶಾ ನವಾಜ್ನ್ನು ಸೋಮವಾರ ಪೊಲೀಸರು ವಶಕ್ಕೆ ಪಡೆದಿದ್ದು ಸೋಮವಾರವೇ ಬೆಂಗಳೂರಿನಲ್ಲಿ ಮತ್ತಿಬ್ಬರು ಪೆಡ್ಲರ್ಗಳನ್ನು ಬಂಧಿಸಿದ್ದಾರೆ.
ಕೆಂಗೇರಿ ನಿವಾಸಿ ಶಾಮ್ ಹಾಗು ನೈಜೀರಿಯಾ ಪ್ರಜೆ ಬಂಧಿತ ಡ್ರಗ್ ಪೆಡ್ಲರ್ಗಳು. ಈ ಪೆಡ್ಲರ್ಗಳು ಡ್ಯಾನ್ಸರ್ ಕಿಶೋರ್ ಶೆಟ್ಟಿ ಹಾಗೂ ಅಕೀಲ್ ನೌಶೀಲ್ಗೆ ಮುಂಬೈ, ಗೋವಾದಿಂದ ಡ್ರಗ್ಸ್ ಸರಬರಾಜು ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
ಮುಂಬೈ, ಗೋವಾದಿಂದ ಡ್ರಗ್ಸ್ ಸ್ಮಗಲ್ ಮಾಡಿ ಮಂಗಳೂರಿನಲ್ಲಿ ಪೂರೈಸುತ್ತಿದ್ದ ಈ ಪೆಡ್ಲರ್ಗಳು ಎಂಡಿಎಂಎ, ಎಲ್ಎಸ್ಡಿ, ಸೇರಿದಂತೆ ಇನ್ನಿತರ ಸಿಥೆಟಿಕ್ ಡ್ರಗ್ಸ್ ಸ್ಮಗಲ್ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
ಡ್ರಗ್ಸ್ ದಂಧೆ ಪ್ರಕರಣಕ್ಕೆ ಸಂಬಂಧಿಸಿ ಈವರೆಗೆ 8 ಮಂದಿಯನ್ನು ಬಂಧನ ಮಾಡಿರುವ ಸಿಸಿಬಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.