ಬ್ರಹ್ಮಾವರ, ಸೆ 29(DaijiworldNews/PY): ಪ್ರಾಕೃತಿಕ ವಿಕೋಪದಡಿ ಹಾನಿಗೊಳಗಾದ ಬ್ರಹ್ಮಾವರ ತಾಲೂಕು ವ್ಯಾಪ್ತಿಯ ಕುಟುಂಬಗಳಿಗೆ ಸೆ.29ರ ಮಂಗಳವಾರದಂದು ಪರಿಹಾರ ಧನದ ಚೆಕ್ ಅನ್ನು ಬ್ರಹ್ಮಾವರದ ಶಾಸಕರ ಕಚೇರಿಯಲ್ಲಿ ಶಾಸಕ ಕೆ. ರಘುಪತಿ ಭಟ್ ವಿತರಿಸಿದರು.







ವಾರಂಬಳ್ಳಿ ಗ್ರಾಮದ ರಂಜನ್ ಅವರಿಗೆ ರೂ. 39,942, ಅರುಣಾ ಶೆಟ್ಟಿಗಾರ್ ಅವರಿಗೆ ರೂ.11,000, ಹೇರೂರು ಗ್ರಾಮದ ಸುಶೀಲಾ ಶೆಡ್ತಿ ಅವರಿಗೆ ರೂ. 55,000, ಹಾರಾಡಿ ಗ್ರಾಮದ ಜಯಂತಿ ಅವರಿಗೆ ರೂ. 22,000, ಆನಂದ ಅಮೀನ್ ಅವರಿಗೆ ರೂ. 24,726, ಚೇರ್ಕಾಡಿ ಗ್ರಾಮದ ಯಶೋಧ ಅವರಿಗೆ ರೂ. 20,000, ಕಳ್ತೂರು ಗ್ರಾಮದ ಸುಶೀಲಾ ಅವರಿಗೆ ರೂ. 39,942, ಉಪ್ಪೂರು ಗ್ರಾಮದ ಪೀಟರ್ ಡಿಸೋಜ ಅವರಿಗೆ ರೂ. 35,000, ರಾಘವೇಂದ್ರ ರಾವ್ ಅವರಿಗೆ ರೂ. 35,000 ಗಳ ಚೆಕ್ ಸೇರಿದಂತೆ 9 ಕುಟುಂಬಗಳಿಗೆ ಒಟ್ಟು ರೂ. 2,80,610 ಮೊತ್ತದ ಚೆಕ್ ವಿತರಿಸಲಾಯಿತು.
ಈ ಸಂದರ್ಭ ಗ್ರಾಮಾಂತರ ಬಿಜೆಪಿ ಅಧ್ಯಕ್ಷ ವೀಣಾ ನಾಯ್ಕ್, ಪ್ರಧಾನ ಕಾರ್ಯದರ್ಶಿ ಅಶೋಕ್ ಹೇರೂರು, ಚಾಂತಾರು ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಉದಯ ಕಾಮತ್, ಉಪ್ಪೂರು ಗ್ರಾಮ ಪಂಚಾಯತ್ ಮಾಜಿ ಸದಸ್ಯ ನಿತ್ಯಾನಂದ, 38ನೇ ಕಳ್ತೂರು ಗ್ರಾಮ ಪಂಚಾಯತ್ ಮಾಜಿ ಸದಸ್ಯ ರಮಾಕಾಂತ್ ಕಾಮತ್ ಮತ್ತು ಬ್ರಹ್ಮಾವರ ತಾಲೂಕು ಕಂದಾಯ ನಿರೀಕ್ಷಕರಾದ ಲಕ್ಷ್ಮೀನಾರಾಯಣ ಭಟ್ ಉಪಸ್ಥಿತರಿದ್ದರು.