ಕಾಸರಗೋಡು, ಸೆ. 29 (DaijiworldNews/MB) : ಮಂಗಳೂರಿನಿಂದ ಕಾರಿನಲ್ಲಿ ಸಾಗಿಸುತ್ತಿದ್ದ ಸುಮಾರು 25 ಕಿಲೋ ಗಾಂಜಾವನ್ನು ನೀಲೇಶ್ವರ ಅಬಕಾರಿ ದಳದ ಸಿಬಂದಿಗಳು ವಶಪಡಿಸಿಕೊಂಡಿದ್ದು, ಇಬ್ಬರನ್ನು ಬಂಧಿಸಿದ್ದಾರೆ.


ಬಂಧಿತರನ್ನು ಕಾಸರಗೋಡು ಅಣಂಗೂರಿನ ಅಬ್ದುಲ್ ಸಮದ್ (39) ಉದುಮ ಪಳ್ಳಿಕೆರೆ ಕಲ್ಲಿಂಗಾಲ್ನ ರಫೀಕ್ (41) ಎಂದು ಗುರುತಿಸಲಾಗಿದೆ.
ಖಚಿತ ಮಾಹಿತಿಯಂತೆ ನೀಲೇಶ್ವರ ಪಳ್ಳಿಕೆರೆ ಗೇಟ್ ಸಮೀಪ ಕಾರ್ಯಾಚರಣೆ ನಡೆಸಿದ ಪೊಲೀಸರು ಕಾರನ್ನು ತಪಾಸಣೆ ನಡೆಸಿದಾಗ ಗಾಂಜಾ ಪತ್ತೆಯಾಗಿದೆ. ಗಾಂಜಾವನ್ನು ಮಂಗಳೂರಿನಿಂದ ತಂದಿದ್ದಾಗಿ ಆರೋಪಿಗಳು ತಪ್ಪ್ಪೊಪ್ಪಿಕೊಂಡಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ.