ಮಂಗಳೂರು, ಸೆ 29(DaijiworldNews/PY): ಮಂಗಳೂರು ವಿಭಾಗದ ಅಬಕಾರಿ ಅಧೀಕ್ಷಕ ವಿನೋದ್ ಕುಮಾರ್ ಹಾಗೂ ಅಬಕಾರಿ ಉಪ ಅಧೀಕ್ಷಕ ಶಿವಪ್ರಸಾದ್ ಅವರ ನೇತೃತ್ವದ ತಂಡವು ಅಬಕಾರಿ ಜಂಟಿ ಆಯುಕ್ತ ಶೈಲಜಾ ಎ.ಕೋಟೆ ಅವರ ನಿರ್ದೇಶನದಂತೆ ಸೆ.29ರ ಮಂಗಳವಾರದಂದು ವಿವಿಧ ಪ್ರದೇಶಗಳಲ್ಲಿ ದಾಳಿ ನಡೆಸಿದ್ದು, ಗಾಂಜಾ ಸೇವಿಸುತ್ತಿದ್ದ ಏಳು ಮಂದಿಯನ್ನು ಬಂಧಿಸಿದ್ದು, ಆರೋಪಿಗಳಿಂದ 500 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.

ಸಾಂದರ್ಭಿಕ ಚಿತ್ರ
ಬಂಧಿತ ಆರೋಪಿಗಳನ್ನು ಅಲಿಸ್ಟರ್, ಪ್ರಥಮ್ ಶೆಟ್ಟಿ, ಪ್ರಥಮ್ ದೇವಾಡಿಗ, ವಿಶ್ವಾಸ್, ಮಂಜುನಾಥ್, ಚಿರಾಗ್ ಹಾಗೂ ಕ್ರಿಸ್ ಎಂದು ಗುರುತಿಸಲಾಗಿದೆ.
ಬಂಧಿತ ಆರೋಪಿಗಳ ವಿರುದ್ದ ಎಂಟು ಪ್ರಕರಣಗಳು ದಾಖಲಾಗಿವೆ.
ಸೀಮಾ ಮರಿಯಾ ಸುವಾರೀಸ್, ಅಬಕಾರಿ ಉಪ ನಿರೀಕ್ಷಕರುಗಳಾದ ಪ್ರತಿಭಾ.ಜಿ, ಕಮಲ.ಹೆಚ್.ಎನ್ ಹಾಗೂ ಸಿಬ್ಬಂದಿಗಳಾದ ಸಂತೋಷ್ ಕುಮಾರ್, ಸುನಿಲ್, ಉಮೇಶ್ ಹೆಚ್, ಸಂದೀಪ್ ಕುಮಾರ್ ಹಾಗೂ ಮನ್ಮೋಹನ್ ಅಬಕಾರಿ ಅಧಿಕಾರಿಗಳ ತಂಡದಲ್ಲಿದ್ದರು.