ಉಡುಪಿ, ಸೆ. 29 (DaijiworldNews/SM): ನೆದರ್ಲ್ಯಾಂಡ್ನಿಂದ ಉಡುಪಿಗೆ ಡ್ರಗ್ಸ್ ಪೂರೈಸುತ್ತಿದ್ದ ಮಾಸ್ಟರ್ ಮೈಂಡ್ ಸೆರೆಯಾಗಿದ್ದು, ನಾಲ್ವರನ್ನು ಬಂಧಿಸಲಾಗಿದೆ. ಬೆಂಗಳೂರಿನಲ್ಲಿ ಎನ್ ಸಿಬಿ ಕಾರ್ಯಾಚರಣೆ ನಡೆಸಿದ್ದು, ನಾಲ್ವರನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಮಾಸ್ಟರ್ ಮೈಂಡ್ ಫಾಹಿಮ್ ಸಹಿತ ನಾಲ್ವರು ಎನ್ಸಿಬಿ ಬಲೆಗೆ ಬಿದ್ದಿದ್ದಾರೆ. ಕೆ.ಪ್ರಮೋದ್, ಫಾಹಿಮ್, ಬಶೀರ್, ಎಸ್.ಎಸ್ ಶೆಟ್ಟಿ ಬಂಧಿತರು. ಆರೋಪಿಗಳು ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಡ್ರಗ್ಸ್ ಪೂರೈಕೆ ಮಾಡುತ್ತಿದ್ದರು. ಮಣಿಪಾಲದ ವಿದ್ಯಾರ್ಥಿಗಳಿಗೂ ಡ್ರಗ್ಸ್ ಪೂರೈಸುತ್ತಿದ್ದರು ಎನ್ನುವ ಮಾಹಿತಿ ಲಭಿಸಿದ್ದು, ಇದಕ್ಕೆ ಪೂರಕವೆಂಬಂತೆ, ವಿದೇಶಿ ಪೋಸ್ಟ್ ಮೂಲಕ ಉಡುಪಿಗೆ ವಿಳಾಸವಿಲ್ಲದೆ ಬಂದ ಎಂಡಿಎಂಎ ಡ್ರಗ್ಸ್ ಲಭ್ಯವಾಗಿದೆ. ಇದನ್ನು ಎನ್ ಸಿಬಿ ತಂಡ ಜಪ್ತಿ ಮಾಡಿದೆ. ಇನ್ನು ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಕಾರ್ಯಾಚರಣೆ ಮಾಡಿ ನಾಲ್ವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳು ವೆಬ್ ಸಿರೀಸ್ ನೋಡಿ ಎಂಡಿಎಂಎ ಡ್ರಗ್ಸ್ ಆರ್ಡರ್ ಮಾಡಲು ಕಲಿತಿದ್ದರು. ಕ್ರಿಪ್ಟೊ ಕರೆನ್ಸಿ ಮೂಲಕ ಮಾದಕ ವಸ್ತು ಆರ್ಡರ್ ಮಾಡುತ್ತಿದ್ದರು ಎಂಬುದು ಸದ್ಯ ತಿಳಿದುಬಂದಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.