ಮಂಗಳೂರು, ಸೆ. 30 (DaijiworldNews/MB) : ನಗರದ ಹಂಪನಕಟ್ಟೆಯಲ್ಲಿರುವ ಬ್ಯಾಂಕ್ ಆಫ್ ಬರೋಡಾದ ಮಂಗಳೂರು ಪ್ರಧಾನ ಕಛೇರಿಯಲ್ಲಿ ಇಂದು ಮುಂಜಾನೆ ಸುಮಾರು 5 ಗಂಟೆಗೆ ಅಗ್ನಿ ಅನಾಹುತ ನಡೆದು ಭಾರೀ ಹಾನಿಯಾಗಿದೆ ಎಂದು ತಿಳಿದುಬಂದಿದೆ.










ಈ ಅಗ್ನಿ ಅನಾಹುತದಿಂದಾಗಿ ಕಚೇರಿಯಲ್ಲಿದ್ದ ಹಲವು ಎಲೆಕ್ಟ್ರಾನಿಕ್ ಉಪಕರಣಗಳು ಸುಟ್ಟು ಹೋಗಿದೆ ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಅಗ್ನಿ ಶಾಮಕದಳದ ಸಿಬ್ಬಂದಿಗಳು ಆಗಮಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದ್ದಾರೆ. ಬೆಂಕಿ ಅವಘಡದಿಂದಾಗಿ ಐದು ಹವಾನಿಯಂತ್ರಣಗಳು ಮತ್ತು ಕಂಪ್ಯೂಟರ್ಗಳು ಸುಟ್ಟು ಹೋಗಿವೆ.
ಅವಘಡದಿಂದಾಗಿ ಕಚೇರಿ ಸ್ಥಗಿತಗೊಂಡಿದ್ದರೂ, ಜ್ಯೋತಿ ಮತ್ತು ಫಳ್ನೀರ್ ಶಾಖೆಗಳು ಎಂದಿನಂತೆ ಸೇವೆಯನ್ನು ಮುಂದುವರಿಸಲಾಗುವುದು ಎಂದು ಶಾಖೆಯ ಅಧಿಕಾರಿಗಳು ನೋಟಿಸ್ ಮೂಲಕ ಮಾಹಿತಿ ನೀಡಿದ್ದಾರೆ.