ಕಾಸರಗೋಡು, ಸೆ. 30 (DaijiworldNews/MB) : ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧಿತನಾಗಿ ಕೋವಿಡ್ ನಿಗಾ ಕೇಂದ್ರದಲ್ಲಿದ್ದ ಆರೋಪಿ ಪರಾರಿಯಾದ ಘಟನೆ ನಿನ್ನೆ ರಾತ್ರಿ ನಡೆದಿದೆ.

ಉಪ್ಪಳ ಕೈಕಂಬದ ಆದಂ ಖಾನ್ (24) ಪರಾರಿಯಾದವನು.
ಪಡನ್ನಕ್ಕಾಡ್ನಲ್ಲಿರುವ ಕೋವಿಡ್ ನಿಗಾ ಕೇಂದ್ರದಿಂದ ತಪ್ಪಿಸಿ ಪರಾರಿಯಾಗಿದ್ದಾನೆ. ಕೇಂದ್ರದ ಕಿಟಿಕಿ ಮುರಿದು ಈತ ಪರಾರಿಯಾಗಿದ್ದಾನೆ.
ಮುಸ್ಲಿಂ ಲೀಗ್ ಕಾರ್ಯಕರ್ತ ಉಪ್ಪಳದ ಮುಸ್ತಫಾರವರ ಕೊಲೆಗೆ ಯತ್ನಿಸಿದ ಪ್ರಕರಣದ ಆರೋಪಿಯಾಗಿದ್ದಾನೆ. 2019 ರ ಡಿ. 26 ರಂದು ಕೃತ್ಯ ನಡೆದಿತ್ತು.
ತಲೆಮರೆಸಿಕೊಂಡಿದ್ದ ಆದಂ ಖಾನ್ ಹಾಗೂ ಈತನ ಸಹಚರ ನೌಶಾದ್ ನನ್ನು ಕಾಸರಗೋಡು ಡಿವೈಎಸ್ಪಿ ಬಾಲಕೃಷ್ಣನ್ ನಾಯರ್ ನೇತೃತ್ವದ ಪೊಲೀಸ್ ತಂಡ ಬಂಧಿಸಿತ್ತು.
ನ್ಯಾಯಾಲಯದ ಪ್ರಕ್ರಿಯೆ ನಡೆದು ಕೋವಿಡ್ ನಿಗಾ ಕೇಂದ್ರದಲ್ಲಿ ರಿಸಲಾಗಿತ್ತು. ಈ ನಡುವೆ ನಿನ್ನೆ ರಾತ್ರಿ ಪರಾರಿಯಾಗಿದ್ದು, ಈತನಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.