ಕಾಸರಗೋಡು, ಸೆ. 30 (DaijiworldNews/MB) : ತಂಡವೊಂದು ಯುವಕರಿಬ್ಬರ ಮೇಲೆ ಹಲ್ಲೆ ನಡೆಸಿದ ಘಟನೆ ಉಪ್ಪಳ ಸಮೀಪದ ಕುಬಣೂರಿನಲ್ಲಿ ನಡೆದಿದೆ.

ಕುಬಣೂರು ಶಾಲೆ ಬಳಿ ಕಾರನ್ನು ತಡೆದ ತಂಡವು ಹಲ್ಲೆ ನಡೆಸಿದೆ. ಗಾಯಗೊಂಡಿರುವ ಕುಬಣೂರಿನ ನೌಮಾನ್ (19), ರಫೀಕ್ (21) ರವರನ್ನು ಕುಂಬಳೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರಿಗೂ ಹಾನಿಗೊಳಿಸಲಾಗಿದೆ.
ಮಂಜೇಶ್ವರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.