ಸುರತ್ಕಲ್, ಸೆ 30(DaijiworldNews/PY): ಹಿಂಬದಿಯಿಂದ ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ಎದುರಿದ್ದ ಖಾಸಗಿ ಬಸ್ಗೆ ಸ್ಕೂಟರ್ ಡಿಕ್ಕಿ ಹೊಡೆದು ದ್ವಿಚಕ್ರ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಸುರತ್ಕಲ್ನ ಮಿಸ್ಕಿತ್ ಹಾಸ್ಪಿಟಲ್ ಬಳಿ ನಡೆದಿದೆ.






ಮೃತಪಟ್ಟ ದ್ವಿಚಕ್ರ ಸವಾರನನ್ನು ಜೋಕಟ್ಟೆ ನಿವಾಸಿ ಸುಧಾಕರ್ (28) ಎಂದು ಗುರುತಿಸಲಾಗಿದೆ.
ಹಿಂಬದಿಯಿಂದ ಸ್ಕೂಟರ್ಗೆ ಲಾರಿ ಡಿಕ್ಕಿ ಹೊಡೆದಿದ್ದು, ಡಿಕ್ಕಿ ಹೊಡೆದ ರಭಸಕ್ಕೆ ಎದುರಿದ್ದ ಖಾಸಗಿ ಬಸ್ಗೆ ಸ್ಕೂಟರ್ ಡಿಕ್ಕಿ ಹೊಡೆದಿದೆ. ಪರಿಣಾಮ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನೆಯ ಬಗ್ಗೆ ಮಂಗಳೂರು ಉತ್ತರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.