ಕಾಸರಗೋಡು, ಸೆ 30(DaijiworldNews/PY): ಜಿಲ್ಲೆಯಲ್ಲಿ ಬುಧವಾರ 321 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 10,787ಕ್ಕೆ ಏರಿಕೆಯಾಗಿದೆ.

ಬುಧವಾರ ಕೊರೊನಾ ದೃಢಪಟ್ಟ 321 ಮಂದಿಯ ಪೈಕಿ 299 ಮಂದಿಗೆ ಪ್ರಾಥಮಿಕ ಸಂಪರ್ಕದಿಂದ ಹಾಗೂ ಹೊರ ರಾಜ್ಯ ಹಾಗೂ ವಿದೇಶಗಳಿಂದ ಬಂದ ತಲಾ 11 ಮಂದಿಗೆ ಸೋಂಕು ತಗುಲಿದ್ದು, 13 ಆರೋಗ್ಯ ಸಿಬ್ಬಂದಿಗಳಲ್ಲಿ ಸೋಂಕು ಪತ್ತೆಯಾಗಿದೆ.
ಈ ನಡುವೆ ಕೊರೊನಾ ಸೋಂಕಿನಿಂದ 163 ಮಂದಿ ಗುಣಮುಖರಾಗಿದ್ದು, 2763 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಕೇರಳದಲ್ಲಿ 8830 ಮಂದಿಗೆ ಸೋಂಕು ದೃಢಪಟ್ಟಿದೆ