ಕಾಸರಗೋಡು,ಸೆ. 30 (DaijiworldNews/SM): ಎಂಡೋ ಸಲ್ಫಾನ್ ಮಾರಕ ರೋಗಕ್ಕೆ ತುತ್ತಾಗಿದ್ದ ಒಂದು ವರ್ಷದ ಮಗು ಚಿಕಿತ್ಸೆ ಫಲಕಾರಿಯಾದೆ ಮೃತಪಟ್ಟ ಘಟನೆ ಬದಿಯಡ್ಕದಲ್ಲಿ ನಡೆದಿದೆ. ಬದಿಯಡ್ಕ ಪಿಲಿತ್ತಡ್ಕ ಕಾಲನಿಯ ಸುಂದರ ರವರ ಪುತ್ರ ನವಜೀತ್ ಮೃತಪಟ್ಟ ಮಗು.

ಹುಟ್ಟಿನಿಂದಲೇ ತಲೆ ಬೆಳೆಯುವ ರೋಗ ಕಂಡುಬಂದಿದ್ದ ನವಜೀತ್ ಗೆ ಹಲವು ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಯಿತಾದರೂ ಗುಣಮುಖವಾಗಲಿಲ್ಲ. ಈ ಹಿನ್ನೆಲೆ ಕಣ್ಣೂರು, ಕಾಸರಗೋಡು ಹಾಗೂ ಮಂಗಳೂರಿನ ಆಸ್ಪತ್ರೆಗಳಲ್ಲೂ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತಾದರೂ ಯಾವುದೇ ಪ್ರಯೋಜನವಾಗಿಲ್ಲ. ಈ ನಡುವೆ ವೈದ್ಯರ ಸಲಹೆಯಂತೆ ಶಸ್ತ್ರ ಚಿಕಿತ್ಸೆಗೆ ತೀರ್ಮಾನಿಸಲಾಗಿತ್ತು.
ಇದೇ ಕಾರಣದಿಂದಾಗಿ ಕಳೇದ ಮೂರು ವಾರಗಳಿಂದ ಕಲ್ಲಿಕೋಟೆ ಆಸ್ಪತ್ರೆಯಲ್ಲಿ ಚಿಕಿತ್ಸೆಗೆಂದು ಮಗುವನ್ನು ದಾಖಲಿಸಲಾಗಿತ್ತು. ಆದರೆ, ದುರಾದೃಷ್ಟವಶಾತ್ ಬುಧವಾರದಂದು ಮಗು ಕೊನೆಯುಸಿಳೆದಿದೆ.