ಕಾಸರಗೋಡು, ಅ. 01 (DaijiworldNews/MB) : ಮಂಜೇಶ್ವರ ಶಾಸಕ ಎಂ ಖಮರುದ್ದೀನ್ ಆರೋಪಿಯಾಗಿರುವ ಜ್ಯುವೆಲ್ಲರಿ ವಂಚನೆ ಪ್ರಕರಣದ ಬಗ್ಗೆ ಕೇರಳ ವಿಧಾನಸಭಾ ಸಮಿತಿ ಪರಿಶೀಲನೆ ನಡೆಸಲಿದೆ. ತ್ರಿಕ್ಕರಿಪುರ ಶಾಸಕ ಎಂ. ರಾಜ ಗೋಪಾಲ್ ಸಲ್ಲಿಸಿದ್ದ ದೂರಿನ ಹಿನ್ನಲೆಯಲ್ಲಿ ವಿಧಾನಸಭಾ ಸಮಿತಿ ಈ ಬಗ್ಗೆ ಪರಿಶೀಲನೆ ನಡೆಸಲಿದೆ.

ವಿವಿಧ ಠಾಣೆ ಗಳಲ್ಲಿ ನೂರಕ್ಕೂ ಅಧಿಕ ವಂಚನೆ ದೂರುಗಳು ಎಂ .ಸಿ ಕಮರುದ್ದೀನ್ ವಿರುದ್ಧ ದಾಖಲಾಗಿದೆ. ಕಮರುದ್ದೀನ್ ಅಧ್ಯಕ್ಷರಾಗಿರುವ ಫ್ಯಾಶನ್ ಗೋಲ್ಡ್ ಇಂಟರ್ ನ್ಯಾಷನಲ್ ಕಂಪೆನಿ 130 ಕೋಟಿ ರೂ . ಗಳಷ್ಟು 700 ಮಂದಿಯಿಂದ ಠೇವಣಿ ಪಡೆದು ವಂಚನೆ ನಡೆಸಿರುವುದಾಗಿ ದೂರುಗಳು ಲಭಿಸಿವೆ.
ವಂಚನೆಗೆ ಸಂಬಂಧಪಟ್ಟಂತೆ ಕಮರುದ್ದೀನ್ ಆರೋಪಿಯಾಗಿರುವುದರಿಂದ ನೀತಿ ಸಂಹಿತೆ ಉಲ್ಲಂಘನೆ ಎಂದು ರಾಜಗೋಪಾಲ್ ಸ್ಪೀಕರ್ಗೆ ಸಲ್ಲಿಸಿದ್ದ ದೂರಿನಲ್ಲಿ ತಿಳಿಸಿದ್ದು, ಈ ಬಗ್ಗೆ ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿದ್ದರು.
ಈ ನಡುವೆ ಎನ್ಫೋರ್ಸ್ ಮೆಂಟ್ ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ದಾಖಲೆಗಳನ್ನು ಸಂಗ್ರಹಿಸಿದ್ದು, ತನಿಖೆಗೂ ಮುಂದಾಗಿದೆ.