ಮಂಗಳೂರು,ಅ. 01 (DaijiworldNews/MB) : ಸಾಮಾಜಿಕ ಜಾಲತಾಣವಾದ ಫೇಸ್ಬುಕ್ನಲ್ಲಿ ಈಗ ಚಾಲೆಂಜ್ಗಳು ಹಾಕುವುದು ಸಾಮಾನ್ಯವಾಗಿ ಹೋಗಿದೆ. ಇಂದರಂತೆ ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಅವರು ಎರಡು ಮೂರು ದಿನಗಳ ಹಿಂದೆ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ರೋಡ್ ಚಾಲೆಂಜ್ ಒಡ್ಡಿದ್ದು ಇದೀಗ ಈ ಚಾಲೆಂಜ್ ಭಾರೀ ವೈರಲ್ ಆಗಿದೆ.


ಗುಂಡಿಗಳಿಂದ ಕೂಡಿದ ರಸ್ತೆಯ ಫೋಟೋವನ್ನು ಹಾಕಿದ್ದ ಮಿಥುನ್ ರೈ ಎರಡು ದಿನಗಳ ಹಿಂದೆ ಗಡ್ಕರಿ ಅವರಿಗೆ ರೋಡ್ ಚಾಲೆಂಜ್ ಹಾಕಿದ್ದರು. ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75 ಮತ್ತು ಮಂಗಳೂರು-ಸೋಲಾಪುರ ರಾಷ್ಟ್ರೀಯ ಹೆದ್ದಾರಿ 169 ಸಂಪೂರ್ಣ ಹದಗೆಟ್ಟಿದ್ದು ಈ ಫೋಟೋಗಳನ್ನು ಹಾಕಿದ್ದಾರೆ. ಈ ರಸ್ತೆಗಳಲ್ಲಿ ವಾಹನ ಸವಾರರಿಗೆ ಸಂಚಾರ ಮಾಡುವುದೇ ತೀರಾ ಕಷ್ಟವಾಗಿದೆ. , ಬೆಂಗಳೂರಿನಿಂದ ಮಂಗಳೂರಿಗೆ ಪ್ರಯಾಣದ ಸಮಯ ಆರರಿಂದ ಏಳು ಗಂಟೆಗಳಿರುತ್ತದೆ. ಆದರೆ ಈಗ ಇದು ಒಂಬತ್ತರಿಂದ ಹತ್ತು ಗಂಟೆಗಳಿಗಿಂತ ಹೆಚ್ಚು ಸಮಯ ಬೇಕಾಗುತ್ತದೆ. ಕುಲಶೇಖರ ಮತ್ತು ವಾಮಂಜೂರು ನಡುವಿನ ರಸ್ತೆಗಳಲ್ಲಿ ದಿನನಿತ್ಯವು ಅಪಘಾತಗಳು ನಡೆಯುತ್ತದೆ ಎಂದು ಅವರು ಉಲ್ಲೇಖಿಸಿದ್ದಾರೆ.
ಹಾಸನ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಫೋಟೋಗಳನ್ನು ಕೂಡಾ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ರೋಡ್ ಚಾಲೆಂಜ್ ಒಡ್ಡಿದ್ದಾರೆ.
ಇನ್ನು ನಿತಿನ್ ಗಡ್ಕರಿ ಅವರು ಕೊರೊನಾ ಸೋಂಕಿನಿಂದ ಗುಣಮುಖರಾದ ಬಗ್ಗೆ ಗಡ್ಕರಿ ಅವರು ಮಾಡಿರುವ ಪೋಸ್ಟ್ಗೆ ಪ್ರತಿಕ್ರಿಯೆ ನೀಡಿರುವ ಮಿಥುನ್ ರೈ, ನೀವು ಕೊರೊನಾದಿಂದ ಚೇತರಿಸಿಕೊಂಡು ಶೀಘ್ರದಲ್ಲೇ ನಿಮ್ಮ ಕರ್ತವ್ಯವನ್ನು ಪುನರಾರಂಭಿಸುತ್ತೀರಿ ಎಂದು ತಿಳಿದು ನನಗೆ ಸಂತೋಷವಾಗಿದೆ. ದೇವರು ನಿಮ್ಮನ್ನು ಆರೋಗ್ಯವಾಗಿರಿಸಲಿ. ಪ್ರಸ್ತುತ ನೀವು ಕೆಲಸಕ್ಕೆ ವಾಪಾಸ್ ಆರಂಭಿಸಿದ್ದೀರಿ. ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಗೆ ಉತ್ತಮ ಹೆದ್ದಾರಿಗಳನ್ನು ಒದಗಿಸುವ ನಮ್ಮ ವಿನಂತಿಯನ್ನು ಗಮನಿಸಿ. ನಿಮ್ಮ ಸಂಸದರು ಮತ್ತು ಶಾಸಕರು ಹಲವರು ಇದ್ದಾರೆ. ಆದರೆ ಅವರು ನಮ್ಮ ಮನವಿಯನ್ನು ಗಮನಿಸುತ್ತಿಲ್ಲ ಹಾಗೂ ಆಲಿಸುತ್ತಿಲ್ಲ. ದಯವಿಟ್ಟು ಈ ವಿಷಯದ ಬಗ್ಗೆ ಶೀಘ್ರವಾಗಿ ಗಮನ ಹರಿಸಿ. ನಿಮ್ಮ ಪ್ರತಿಕ್ರಿಯೆಯ ನಿರೀಕ್ಷೆಯಲ್ಲಿ ನಾವಿದ್ದೇವೆ ಎಂದು ಹೇಳಿದ್ದಾರೆ.
ಈಗ ಹಲವು ರೋಡ್ ಚಾಲೆಂಜ್ನ್ನು ಆರಂಭ ಮಾಡಿದ್ದಾರೆ.