ಉಡುಪಿ, ಅ 01(DaijiworldNews/PY): ಜಿಲ್ಲೆಯಾದ್ಯಂತ ವಿದ್ಯಾರ್ಥಿ ಸಂಘಟನೆಯನ್ನು ಬಲಗೊಳಿಸಲು, ಎನ್.ಎಸ್.ಯು.ಐ. ರಾಷ್ಟ್ರೀಯ ಕಾರ್ಯದರ್ಶಿಗಳು, ಕರ್ನಾಟಕ ಹಾಗೂ ಗೋವಾ ರಾಜ್ಯಗಳ ಉಸ್ತುವಾರಿಗಳೂ ಆದ ಎರಿಕ್ ಸ್ಟೀಫನ್ ಅವರು, ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಅವರ ಶಿಫಾರಸಿನ ಮೇರೆಗೆ ಉಡುಪಿ ಜಿಲ್ಲಾಎನ್.ಎಸ್.ಯು.ಐ.ಅಧ್ಯಕ್ಷರಾಗಿ ಸೌರಭ್ ಬಲ್ಲಾಳ್ರವರನ್ನು ನೇಮಕ ಮಾಡಲಾಯಿತು.

ಹಾಗೆಯೇ ಎನ್.ಎಸ್.ಯು.ಐ ರಾಷ್ಟ್ರೀಯ ಅಧ್ಯಕ್ಷ ನೀರಜ್ ಕುಂದನ್ ಅವರು ಉಡುಪಿ ಜಿಲ್ಲಾ ಮಾಜಿ ಎಸ್.ಎಸ್.ಯು.ಐ. ಅಧ್ಯಕ್ಷ ಕ್ರಿಸ್ಟನ್ ಅಲ್ಮೇಡಾ ಅವರನ್ನು ರಾಷ್ಟ್ರೀಯ ಸಂಯೋಜಕರನ್ನಾಗಿ ನೇಮಿಸಿದರು. ಇವರನ್ನು ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಅವರು ಅಭಿನಂದಿಸಿದ್ದಾರೆ.