ಕಾಸರಗೋಡು, ಅ. 01(DaijiworldNews/PY): ಠೇವಣಿ ವಂಚನೆ ಆರೋಪಕ್ಕೆ ಸಿಲುಕಿರುವ ಮಂಜೇಶ್ವರ ಶಾಸಕ ಎಂ. ಸಿ ಕಮರುದ್ದೀನ್ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಬಿಜೆಪಿ ಯುವಮೋರ್ಚಾ ಮಂಜೇಶ್ವರ ವಿಧಾನಸಭಾ ಕ್ಷೇತ್ರ ಸಮಿತಿ ನೇತೃತ್ವದಲ್ಲಿ ಇಂಡೈ ಮಂಜೇಶ್ವರ ತಾಲೂಕು ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು.








ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಜಲ ಫಿರಂಗಿ ಪ್ರಯೋಗಿಸಿದರು.ಮೆರವಣಿಗೆ ಮೂಲಕ ಆಗಮಿಸಿದ ಕಾರ್ಯಕರ್ತರು ತಾಲೂಕು ಕಚೇರಿ ಪ್ರವೇಶ ದ್ವಾರದ ಬಳಿ ಹಾಕಲಾಗಿದ್ದ ಬ್ಯಾರಿಕೇಡ್ಗಳನ್ನು ದೂಡಿ ಹಾಕಿ ಮುನ್ನುಗ್ಗಲು ಯತ್ನಿಸಿದ್ದು, ಈ ಸಂದರ್ಭದಲ್ಲಿ ಪೊಲೀಸರು ಜಲಫಿರಂಗಿ ಬಳಸಿದರು.
ಪ್ರತಿಭಟನಾ ಸಭೆಯನ್ನು ಬಿಜೆಪಿ ಯುವಮೋರ್ಚಾ ರಾಜ್ಯ ಕಾರ್ಯದರ್ಶಿ ಕೆ.ಗಣೇಶ್ ಉದ್ಘಾಟಿಸಿದರು. ಪ್ರತಿಭಟನೆಯಲ್ಲಿ ಮಹಿಳಾ ಸಂಯೋಜಕಿ, ವಕೀಲೆ ಶಿಖಾ, ಜಿಲ್ಲಾಧ್ಯಕ್ಷ ಧನಂಜಯ್ ಮದೂರ್, ಉಪಾಧ್ಯಕ್ಷೆ ಅಂಜು, ಮುಖ್ಯ ಕಾರ್ಯದರ್ಶಿ ವೈಶಾಕ್, ಮುರಳೀಧರ್ ಯಾದವ್, ಯತೀಶ್ ಭಂಡಾರಿ ಹಾಗೂ ರಮ್ಯಾ ಶೆಟ್ಟಿ ನೇತೃತ್ವ ವಹಿಸಿದ್ದರು.