ಕಾಸರಗೋಡು, ಅ. 01 (DaijiworldNews/SM): ಜಿಲ್ಲೆಯಲ್ಲಿ ಕೊರೋನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಜಿಲ್ಲೆಯಲ್ಲಿ ಗುರುವಾರ 471 ಮಂದಿಗೆ ಕೊರೋನಾ ದೃಢಪಟ್ಟಿದೆ.

ಇಂದು ಪತ್ತೆಯಾದ ಸೋಂಕಿತರ ಪೈಕಿ 453 ಮಂದಿಗೆ ಸಂಪರ್ಕದಿಂದ ಸೋಂಕು ಪತ್ತೆಯಾಗಿದೆ. 10 ಮಂದಿ ಹೊರರಾಜ್ಯ, 8 ಮಂದಿ ವಿದೇಶದಿಂದ ಮರಳಿದವರಾಗಿದ್ದಾರೆ. 6 ಮಂದಿ ಆರೋಗ್ಯ ಸಿಬ್ಬಂದಿಗಳಿಗೂ ಗುರುವಾರದಂದು ಸೋಂಕು ಪತ್ತೆಯಾಗಿದೆ.
310 ಮಂದಿ ಜಿಲ್ಲೆಯಲ್ಲಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ಇಂದಿನ ಸೋಂಕಿತರ ಮೂಲಕ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 11258ಕ್ಕೆ ತಲುಪಿದೆ 2917 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. 4431 ಮಂದಿ ನಿಗಾದಲ್ಲಿದ್ದಾರೆ.
ಆರು ಮಂದಿ ಪೊಲೀಸರಲ್ಲಿ ಸೋಂಕು:
ಸರ್ಕಲ್ ಇನ್ಸ್ ಪೆಕ್ಟರ್ ಸೇರಿದಂತೆ ಕಾಸರಗೋಡು ನಗರ ಠಾಣೆಯ ಆರು ಪೊಲೀಸರಿಗೆ ಕೊರೋನನಾ ಸೋಂಕು ದೃಢಪಟ್ಟಿದೆ. ಸರ್ಕಲ್ ಇನ್ಸ್ ಪೆಕ್ಟರ್, ಮೂವರು ಪೊಲೀಸ್ ಸಿಬ್ಬಂದಿಗಳು, ಇಬ್ಬರು ಚಾಲಕರಿಗೆ ಸೋಂಕು ಪತ್ತೆಯಾಗಿದೆ. ಈ ಹಿನ್ನಲೆಯಲ್ಲಿ ಇವರ ಜೊತೆ ಸಂಪರ್ಕದಲ್ಲಿದ್ದ ಪೊಲೀಸರು ಕ್ವಾರಂಟೈನ್ ಗೆ ತೆರಳುವಂತೆ ಸೂಚಿಸಲಾಗಿದೆ.