ಬ್ರಹ್ಮಾವರ, ಅ. 02 (DaijiworldNews/MB) : ಮಾನಸಿಕ ಖಿನ್ನತೆಗೆ ಒಳಗಾಗಿ 20 ವರ್ಷದ ಯುವಕ ನೇಣಿಗೆ ಶರಣಾದ ಘಟನೆ ಬ್ರಹ್ಮಾವರದ ಬೈಕಾಡಿ ಗಾಂಧಿನಗರದಲ್ಲಿ ನಡೆದಿದೆ.

ಮೃತ ಯುವಕನನ್ನು ಅಕ್ಷಯ್ ಕುಮಾರ್ (20) ಎಂದು ಗುರುತಿಸಲಾಗಿದೆ.
ಬ್ರಹ್ಮಾವರದ ಮಹೇಶ್ ಹಾರ್ಡವೇರ್ನಲ್ಲಿ ಕೆಲಸ ಮಾಡಿಕೊಂಡಿದ್ದ ಅಕ್ಷಯ್ ಕೊರೊನಾ ಕಾರಣದಿಂದ ಕಳೆದ 3 ತಿಂಗಳಿನಿಂದ ಕೆಲಸ ಬಿಟ್ಟು ಮನೆಯಲ್ಲಿಯೇ ಇದ್ದನು. ಇತ್ತೀಚಿಗೆ ಮಾನಸಿಕ ಖಿನ್ನತೆಗೆ ಒಳಗಾಗಿ, ಸರಿಯಾಗಿ ಮನೆಯಲ್ಲಿ ಯಾರೋಂದಿಗೂ ಮಾತನಾಡದೇ ಇದ್ದು, ಒಬ್ಬನೇ ರೂಮ್ನಲ್ಲಿ ಕುಳಿತುಕೊಳ್ಳುತ್ತಿದ್ದನು. ಗುರುವಾರ ಮಧ್ಯಾಹ್ನ ಮನೆಯ ಮಲಗುವ ಕೋಣೆಯ ಮರದ ಜಂತಿಗೆ ಕಾವಿ ಬಟ್ಟೆಯ ಶಾಲನ್ನು ಕಟ್ಟಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆದರೆ ವೈದ್ಯರು ಯುವಕ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಯಾವುದೇ ಕೆಲಸವಿಲ್ಲದ ಕಾರಣ ಮನೆಯಲ್ಲಿಯೇ ಇದ್ದು ಇತ್ತೀಚಿಗೆ ಮಾನಸಿಕ ಖಿನ್ನತೆಗೆ ಒಳಗಾಗಿ, ಇದೇ ಚಿಂತೆಯಿಂದ ಜೀವನದಲ್ಲಿ ಜಿಗುಪ್ಸೆ ಹೊಂದಿ ಆತ್ಮಹತ್ಮೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.