ಮಂಗಳೂರು, ಅ. 02 (DaijiworldNews/MB) : ಮಹಾತ್ಮ ಗಾಂಧಿಯವರ 151 ನೇ ಜನ್ಮ ದಿನಾಚರಣೆಯಂದು ಜಿಲ್ಲಾ ಕಾಂಗ್ರೆಸ್ ಗಾಂಧಿಯ ಪ್ರತಿಮೆಗೆ ಹೂಮಾಲೆ ಹಾಕುವ ಮೂಲಕ ಆಚರಿಸಿತು. ಹಾಗೆಯೇ ಅಕ್ಟೋಬರ್ 2 ರಂದು ಯುವ ಕಾಂಗ್ರೆಸ್ನೊಂದಿಗೆ ಜಿಲ್ಲಾ ಕಾಂಗ್ರೆಸ್ ಸೇರಿ ಮಿನಿ ವಿಧಾನ ಸೌಧದಲ್ಲಿ ಕೃಷಿ ಮಸೂದೆ ವಿಚಾರವಾಗಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿ ರಾಜ್ಯ, ಕೇಂದ್ರ ಸರ್ಕಾರ ರೈತ ವಿರೋಧಿ ಎಂದು ಆರೋಪಿಸಿತು. ಆಕ್ರೋಶಗೊಂಡ ಪ್ರತಿಭಟನಾಕಾರರು ರಸ್ತೆ ತಡೆ ಮಾಡಿದ್ದು ಈ ಸಂದರ್ಭದಲ್ಲಿ ಪ್ರತಿಭಟನಕಾರರನ್ನು ಬಂಧಿಸಲಾಯಿತು.














ಹಾಗೆಯೇ ಈ ಸಂದರ್ಭದಲ್ಲಿ ಕಾಂಗ್ರೆಸ್ ಪ್ರತಿಭಟನಾಕಾರರು ಹತ್ರಸ್ ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ವಿರೋಧಿಸಿ ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ದ ಘೋಷಣೆಗಳನ್ನು ಕೂಗಿದರು.
ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಮಾಜಿ ಸಚಿವ ರಮನಾಥ್ ರೈ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಮಾಜಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾರನ್ನು ಪೊಲೀಸರು ಬಂಧಿಸಿದರು.