ಉಡುಪಿ, ಅ. 02 (DaijiworldNews/MB) : ಯುವಶಕ್ತಿ ಕರ್ನಾಟಕ ಇದರ ವತಿಯಿಂದ ಅಜ್ಜರಕಾಡು ಸರಕಾರಿ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಲು ಸರಕಾರಕ್ಕೆ ಒತ್ತಾಯಿಸಿ ಉಪವಾಸ ಸತ್ಯಾಗ್ರಹ ಇಂದು ಬೆಳ್ಳಿಗೆ 7 ರಿಂದ ಪ್ರಾರಂಭವಾಗಿದ್ದು ಮುಂದಿನ ದಿನಗಳಲ್ಲಿ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಲು ನಿರ್ಲಕ್ಷ ವಹಿಸಿದ್ದಲ್ಲಿ ಉಗ್ರ ಹೋರಾಟದ ಹಾದಿ ಹಿಡಿಯ ಬೇಕಾಗುವುದು ಎಂದು ಯುವ ಶಕ್ತಿ ಕರ್ನಾಟಕ ಸಮಿತಿಯವರು ತಿಳಿಸಿರುತ್ತಾರೆ.





ಸರಕಾರಿ ಆಸ್ಪತ್ರೆಯ ಅವಶ್ಯಕತೆಯ ಬಗ್ಗೆ ಡಾ ಪಿ. ವಿ ಭಂಡಾರಿ ಇವರು ತಿಳಿಸುವ ಮೂಲಕ ಚಾಲನೆ ನೀಡಲಾಯಿತು.
ಉಪವಾಸ ಸತ್ಯಾಗ್ರಹದಲ್ಲಿ ಯುವಶಕ್ತಿ ಕಾರ್ನಟಕ ಇದರ ರಾಜ್ಯಾಧ್ಯಕ್ಷ ಪ್ರಮೋದ್ ಉಚ್ಚಿಲ್, ಉಪಾದ್ಯಕ್ಷರಾದ ಬೆಳ್ಕಳೆ ಶರತ್ ಶೆಟ್ಟಿ, ಹಬೀಬ್ ಉಡುಪಿ, ಸಜ್ಜನ್ ಶೆಟ್ಟಿ, ಅಜಯ್ ಕಪ್ಪೆಟ್ಟು, ಹಮ್ಮದ್, ಶಾಹೀದ್ ರಝಾ ಉಡುಪಿ, ಶರಣ್, ನವೀದ್,ಅಶ್ರಾರ್ ಶ್ರೀಶ್ ಉಪಸ್ಥಿತರಿದ್ದರು.
ಕರಾವಳಿ ಯೂತ್ ಕ್ಲಾಬ್ ಇದರ ಜಿಲ್ಲಾಧ್ಯಕ್ಷರಾದ ಆಶೋಕ್ ಹಾಗೂ ಸದಸ್ಯರ ಉಪಸ್ಥಿತಿ ಇದ್ದರು.
ಮಾಜಿ ಶಾಸಕರಾದ ವಿನಯ್ ಕುಮಾರ್ ಸೊರಕೆಯವರು ಪ್ರತಿಭಟನಾ ಸ್ಥಳಕ್ಕೆ ಬೇಟಿ ನೀಡಿದಾಗ ಪಿ ವಿ ಭಂಡಾರಿಯವರು ಅಜ್ಜರಕಾಡಿನ ಸರಕಾರಿ ಆಸ್ಪತ್ರೆ ಸರಿಯಾದ ವ್ಯವಸ್ಥೆ ಇಲ್ಲದೆ ಅವ್ಯವಸ್ಥೆಯ ಆಗರವಾಗಿದೆ. ಕೂಡಲೇ ಸರಕಾರ ಇದರತ್ತ ಗಮನ ಹರಿಸಬೇಕಾಗಿದೆ. ಕೊರೊನಾ ಭಯದ ವಾತಾವರಣದಲ್ಲಿ ಸರಿಯಾದ ಬೆಡ್ಸ್, ಸಾಕಷ್ಟು ಸಿಬ್ಬಂದಿಗಳು ಇಲ್ಲ. ಒಂದೊಂದೆ ವಿಭಾಗವನ್ನು ಸೌಕರ್ಯವಿಲ್ಲದೆ ಮುಚ್ಚಲಾಗುತ್ತಿದೆ. ಇದರಿಂದ ಬಡವರಿಗೆ ತೊಂದರೆಯಾಗುತ್ತಿದೆ. ಎಂದರು.
ಇದಕ್ಕೆ ಸೊರಕೆಯವರು ಪ್ರತಿಕ್ರಿಯಿಸಿ, ಅಜ್ಜರಕಾಡಿನ ಮೇಲ್ದರ್ಜೆಗೆ ಏರಿಸಲು ಇದು ಒಳ್ಳೆಯ ಅವಕಾಶ. ನಾವು ಇದಕ್ಕೆ ಒತ್ತಾಯಿಸುತ್ತೇವೆ. ನಿಮ್ಮ ಜೊತೆ ನಾವಿದ್ದೇವೆ ಎಂದು ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.