ಮಂಗಳೂರು, ಅ. 02(DaijiworldNews/PY): ವ್ಯಕ್ತಿಯೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಉಳ್ಳಾಲ ಠಾಣಾ ವ್ಯಾಪ್ತಿಯ ಮಾಡೂರಿನ ಕುಶಾಲನಗರದಲ್ಲಿ ನಡೆದಿದೆ.

ನಗರದ ಡೊಂಗರಕೇರಿಯ ಕಾಶಿ ಸದನ ನಿವಾಸಿ ಯಜ್ಞೇಶ್ ಮೋಹನ್ ಆಚಾರ್ (43) ಮೃತ ವ್ಯಕ್ತಿ.
ಲಾಕ್ಡೌನ್ ನಂತರ ಯಜ್ಞೇಶ್ ಅವರ ಪತ್ನಿ ಅವರ ತವರು ಮನೆಗೆ ಹೋಗಿದ್ದರು. ಇದಾದ ಬಳಿಕ ಯಜ್ಞೇಶ್ ಅವರು ಮನೆಯಲ್ಲಿ ಏಕಾಂಗಿಯಾಗಿದ್ದರು. ಒಂಟಿತನದಿಂದಾದ ಖಿನ್ನತೆಯಿಂದಾಗಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ.
ಘಟನೆಯ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.