ಕುಂದಾಪುರ, ಅ. 02 (DaijiworldNews/HR): ಯುವಾ ಬಿಗ್ರೇಡ್ ಉಡುಪಿ ಜಿಲ್ಲೆ, ಸೋದರಿ ನಿವೇದಿತ ಪ್ರತಿಷ್ಠಾನ, ಸ್ವರಾಜ್ಯಕ್ಕ ಮುಕ್ಕಾಲ್ಮೂರು ಸಂಘಟನೆಗಳ ಆಶ್ರಯದಲ್ಲಿ ಕುಂದಾಪುರದ ಶಾಸ್ತ್ರೀ ವೃತ್ತದ ಬಳಿ ಗಾಂಧಿ ಜಯಂತಿ ಅಂಗವಾಗಿ ಆತ್ಮನಿರೀಕ್ಷಣೆಗಾಗಿ ಸತ್ಯಾಗ್ರಹ ಆರಂಭವಾಯಿತು.



ಮಹಾತ್ಮ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಆತ್ಮನಿರೀಕ್ಷಣೆಗಾಗಿ ಸತ್ಯಾಗ್ರಹ ಆರಂಭವಾಗಿದ್ದು, ಸಂಜೆಯ ತನಕ ಈ ಸತ್ಯಾಗ್ರಹ ನಡೆಯಲಿದೆ.
ರಾಷ್ಟ್ರದ ಕರೆ ಬಂದಾಗ ತನು-ಮನ-ಧನ ಎಲ್ಲವನ್ನೂ ಸಮರ್ಪಿಸುವೆ, ರಾಷ್ಟ್ರ ವಿರೋಧಿ ಸಿದ್ಧಾಂತವನ್ನಾಗಲಿ ಅದರ ಸಮರ್ಥಕರನ್ನಾಗಲಿ ಎಂದಿಗೂ ಅನುಸರಿಸಲಾರೆ, ರಾಮರಾಜ್ಯದ ಆದರ್ಶಗಳಿಗೆ ನಾನು ಬದ್ದನಾಗಿರುತ್ತೇನೆ, ಗೋಹತ್ಯೆಯನ್ನು ನಾನು ವಿರೋಧಿಸುತ್ತೇನೆ, ಅಸ್ಪೃಶ್ಯತೆ ಆಚರಣೆ ಮಾಡುವುದಿಲ್ಲ, ಮಾಡುವವರನ್ನು ವಿರೋಧಿಸುತ್ತೇನೆ, ಮಾದಕ ದ್ರವ್ಯಗಳ ದಾಸನಾಗುವುದಿಲ್ಲ, ಗಾಂಧೀಜಿ ಪ್ರತಿಪಾದಿಸಿದ ಸ್ವಚ್ಛತೆಯ ಕುರಿತಂತೆ ಗಮನಹರಿಸಿ, ಸ್ವಚ್ಛಭಾರತ ನಿರ್ಮಾಣಕ್ಕಾಗಿ ಶ್ರಮಿಸುತ್ತೇನೆ, ಸ್ವದೇಶಿ ವಸ್ತುಗಳ ಬಳಕೆ ಹೆಚ್ಚಿಸಿ ಗ್ರಾಮೋದ್ಯೋಗಳಿಗೆ ಆಸರೆಯಾಗುತ್ತೇನೆ. ಆತ್ಮನಿರ್ಭರ ಭಾರತಕ್ಕೆ ನನ್ನ ಬದುಕನ್ನು ಮೀಸಲಿಡುತ್ತೇನೆ ಎನ್ನುವ ಘೋಷ ವಾಕ್ಯಗಳೊಂದಿಗೆ ಸತ್ಯಾಗ್ರಹ ನಡೆಯಿತು.
ಸತ್ಯಾಗ್ರಹದಲ್ಲಿ ಪ್ರದೀಪ ಕುಮಾರ ಬಸ್ರೂರು, ಸುಬ್ರಹ್ಮಣ್ಯ ಉಡುಪಿ, ಶಶಿಧರ ಉಡುಪಿ, ಶಮಂತ ಉಡುಪಿ, ಶ್ರೀರಾಮ್ ಉಡುಪಿ, ರಾಘವೇಂದ್ರ ಜೋಗಿ ಶಂಕರನಾರಾಯಣ, ಪ್ರಶಾಂತ ಖಾರ್ವಿ ಬಸ್ರೂರು, ಭರತ ಬಸ್ರೂರ ಉಪಸ್ಥಿತರಿದ್ದರು.