ಮಂಗಳೂರು, ಮೇ 15 : ಮತ ಎಣಿಕೆ ಕೇಂದ್ರದಿಂದ ನಿರ್ಗಮಿಸುತ್ತಿದ್ದ ಬಂಟ್ವಾಳ ಕ್ಷೇತ್ರದಲ್ಲಿ ಸೋಲುಂಡ ಅಭ್ಯರ್ಥಿ ಕಾಂಗ್ರೆಸ್ ರಮಾನಾಥ ರೈ ಅವರ ವಾಹನಕ್ಕೆ ಕೆಲ ಬಿಜೆಪಿ ಕಾರ್ಯಕರ್ತರು ಬಾಟಲಿ ಎಸೆದ ಘಟನೆ ನಗರದ ಬೊಂದೇಲ್ ನಲ್ಲಿ ನಡೆದಿದೆ. ರಮಾನಾಥ ರೈ ಅವರು ನಿರ್ಗಮಿಸುತ್ತಿದ್ದ ವೇಳೆ ಬಿಜೆಪಿ ಕಾರ್ಯಕರ್ತರು ಮೋದಿ ಮೋದಿ ಎಂದು ಘೋಷಣೆ ಕೂಗಿದ್ದಾರೆ. ಇದೇ ವೇಳೆ ಅವರ ವಾಹನಕ್ಕೆ ಕೆಲ ಕಿಡಿಗೇಡಿಗಳು ಬಾಟಲಿಗಳನ್ನು ತೂರಿದ್ದಾರೆ, ಈ ವೇಳೆ ಪೊಲೀಸರು ಮಧ್ಯಪ್ರವೇಶಿಸಿದ ಪೋಲೀಸರು ರೈ ಅವರು ಸುರಕ್ಷಿತವಾಗಿ ಸಾಗುವುದಕ್ಕೆ ಅವಕಾಶ ಮಾಡಿಕೊಟ್ಟರು.