ಬಂಟ್ವಾಳ, ಅ. 02 (DaijiworldNews/HR): ದ.ಕ.ಜಿಲ್ಲಾ ಶಾಮಿಯಾನ ಮಾಲಕರ ಸಂಘ(ರಿ.) ಮಂಗಳೂರು , ಬಂಟ್ವಾಳ ಘಟಕ ಇದರ 2019-20 ರ ವಾರ್ಷಿಕ ಮಹಾಸಭೆ ಹಾಗೂ ಆಯುಷ್ಮಾನ್ ಮತ್ತು ಇತರ ಸರಕಾರಿ ಯೋಜನೆಗಳ ನೋಂದಣಿ ಶಿಬಿರದ ಉದ್ಘಾಟನೆ ಕಾರ್ಯಕ್ರಮ ಬಿಸಿರೋಡಿನ ಸ್ಪರ್ಶಾ ಕಲಾ ಮಂದಿರದಲ್ಲಿ ನಡೆಯಿತು.


ಕಾರ್ಯಕ್ರಮವನ್ನು ಉದ್ಘಾಟಿಸಿ ಬಳಿಕ ಮಾತನಾಡಿದ ಶಾಮಿಯಾನ ಮಾಲಕರ ಸಂಘದ ಜಿಲ್ಲಾಧ್ಯಕ್ಷ ಬಾಬು ಕೆ.ವಿಟ್ಲ, ಸಂಘಟನೆ ಬೆಳೆದರೆ ಸದಸ್ಯರು ಬೆಳೆಯುತ್ತಾರೆ , ಸಂಘಟನೆಯ ಉದ್ದೇಶಗಳನ್ನು ಕಾರ್ಯಗತಗೊಳಿಸಲು ಸಂಘಟನಾತ್ಮಕವಾಗಿ ಕೆಲಸ ಮಾಡಬೇಕು. ಸಂಘಟನೆಯು ಬಲಗೊಳ್ಳುತ್ತಿದ್ದು, ಸದಸ್ಯರು ನಿರೀಕ್ಷೆಗೆ ಮೀರಿದ ಕೆಲಸ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಶಾಮಿಯಾನ ಮಾಲಕರ ಸಂಘಕ್ಕೆ ಸ್ವಂತ ಜಮೀನಿನಲ್ಲಿ ಕಟ್ಟಡ ನಿರ್ಮಾಣವೇ ಮುಖ್ಯ ಗುರಿಯಾಗಿದೆ ಇದಕ್ಕೆ ಎಲ್ಲರ ಸಹಕಾರದ ನಿರೀಕ್ಷೆಯಲ್ಲಿದ್ದೇನೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಂಟ್ವಾಳ ವಲಯ ಅಧ್ಯಕ್ಷ ಸುಭಾಶ್ಚಂದ್ರ ಜೈನ್ ಮಾತನಾಡಿ, ಸಂಘ ಸಂಸ್ಥೆ ನಿರೀಕ್ಷೆಗೂ ಮೀರಿ ಬೆಳೆಯಬೇಕಾದರೆ ಪ್ರತಿಯೊಬ್ಬ ಸದಸ್ಯನ ಸಹಕಾರ ಅತೀ ಅಗತ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯದರ್ಶಿ ಶಿವಪ್ರಸದ್ ಹೆಗ್ಡೆ, ಜಿಲ್ಲಾ ಕೋಶಾಧಿಕಾರಿ ಮುರಳೀಧರ ರಾವ್, ಮಂಗಳೂರು ಘಟಕ ದ ಅಧ್ಯಕ್ಷ ಉಮಾನಾಥ ಸುವರ್ಣ, ಮೂಡುಬಿದಿರೆ ಘಟಕ ದ ಅಧ್ಯಕ್ಷ ಗಣೇಶ್ ಕಾಮತ್, ಬೆಳ್ತಂಗಡಿ ಘಟಕದ ಅಧ್ಯಕ್ಷ ಜೆರ್ಮಿ ಡೇಸಾ, ಉಪಸ್ಥಿತರಿದ್ದರು.