ಉಡುಪಿ, ಅ. 02(DaijiworldNews/PY): ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮ ದಿನಾಚರಣೆಯ ಪ್ರಯುಕ್ತ ಅ.2ರ ಶುಕ್ರವಾರದಂದು ಅಜ್ಜರಕಾಡು ಹುತಾತ್ಮ ಸ್ಮಾರಕದ ಎದುರು ಜಿಲ್ಲಾ ಕಾಂಗ್ರೆಸ್ ಪ್ರತಿಭಟನೆ ನಡೆಸಿದ್ದು, ಸರ್ಕಾರದ ವೈಫಲ್ಯ ಹಾಗೂ ಸರ್ವಾಧಿಕಾರ ನೀತಿಗಳ ವಿರುದ್ದ ಘೋಷಣೆ ಕೂಗಿದರು.












ಈ ವೇಳೆ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಕೆಪಿಸಿಸಿ ಪ್ಯಾನಲಿಸ್ಟ್ ಸುಧೀರ್ ಕುಮಾರ್ ಮರೋಳಿ ಅವರು, ಬಿಜೆಪಿ ಇತರ ಧರ್ಮಗಳನ್ನು ದ್ವೇಷಿಸುತ್ತದೆ. ಇದು ಇತರ ಸಮುದಾಯಗಳು, ಕಾರ್ಮಿಕರು ಹಾಗೂ ರೈತರನ್ನು ಅವಮಾನಿಸುತ್ತಿದೆ ಹಾಗೂ ಒಳಗಿನ ಶತ್ರುಗಳ ಮೇಲೆ ಆಕ್ರಮಣ ಮಾಡುತ್ತಿದೆ. ನಮ್ಮ ದೇಶದ ರಾಜಕಾರಣಕ್ಕೆ ಕೊರೊನಾ ವೈರಸ್ ಬಂದು ಆರು ವರ್ಷಗಳೇ ಆಗಿದೆ. ಬಿಜೆಪಿ ನೇತೃತ್ವದ ಸರ್ಕಾರ ಅಲ್ಪಸಂಖ್ಯಾತ ಸಮುದಾಯಗಳನ್ನು ಗುರಿಯಾಗಿಸಿಕೊಂಡಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಯೋಗಿ ಎಂದು ಕರೆಯುವುದು ಒಳ್ಳೆಯದಲ್ಲ ಎಂದರು.
ಹತ್ರಸ್ನ ಅತ್ಯಾಚಾರ ಘಟನೆಯನ್ನು ಖಂಡಿಸಿದ ಅವರು, ಹತ್ರಸ್ನಲ್ಲಿ ದಲಿತ ಮಹಿಳೆಯ ಬಲತ್ಕಾರದ ಅಂತ್ಯಕ್ರಿಯೆ ಮಾಡುವ ಮೂಲಕ ಎಲ್ಲಾ ಸಾಕ್ಷ್ಯಗಳನ್ನು ನಾಶಮಾಡಲು ಪ್ರಯತ್ನಿಸಲಾಯಿತು. ಈ ರೀತಿ ಆಗಬಾರದು. ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಮನೀಷಾ ಅವರ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂದು ಒತ್ತಾಯಿಸಿದರು.
ದೇಶದ ಆರ್ಥಿಕ ಸ್ಥಿತಿ ಮೊದಲಿಗಿಂತ ಕೆಟ್ಟದಾಗಿದೆ. ಬಿಜೆಪಿ ಹಿರಿಯ ನಾಯಕ ಈಶ್ವರಪ್ಪ ಅವರಿಗೆ ಯಾವುದೇ ಸಂಸ್ಕೃತಿ ಇಲ್ಲ. ಇನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಅವರು ಪಕ್ಷದ ಮತ್ತೊಬ್ಬ ಜೋಕರ್. ಬಿಜೆಪಿಗೆ ಸ್ವಲ್ಪ ಸೌಜನ್ಯ, ಪ್ರೀತಿ ಮತ್ತು ಸಹಾನುಭೂತಿ ಇರಲಿ. ಬಿಜೆಪಿ ಸರ್ಕಾರ ಎಪಿಎಂಸಿ ಕಾಯ್ದೆ ಮತ್ತು ಭೂ ಸುಧಾರಣಾ ಕಾಯ್ದೆಗಳನ್ನು ಜಾರಿ ಮಾಡಿ ಜನರನ್ನು ನಂಬುವಂತೆ ಮಾಡುತ್ತಿದೆ ಎಂದು ತಿಳಿಸಿದರು.
ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಮಾತನಾಡಿ, ರಾಷ್ಟ್ರದಲ್ಲಿ ಅಘೋಷಿತ ಆರ್ಥಿಕ ಬಿಕ್ಕಟ್ಟು ಇದೆ. ರಾಷ್ಟ್ರದಲ್ಲಿ ಸಾಕಷ್ಟು ಹಗರಣಗಳು ವರದಿಯಾಗಿವೆ. ಬಿಜೆಪಿ ಸರ್ಕಾರ ಜನವಿರೋಧಿ ಮಸೂದೆಗಳನ್ನು, ಸುಗ್ರೀವಾಜ್ಞೆಗಳನ್ನು ಜಾರಿಗೆ ತಂದು ಹೇರುವ ಕಾರ್ಯ ಮಾಡುತ್ತಿದೆ ಎಂದು ಹೇಳಿದರು.
ಈಗ ನಾವು ಹಿಟ್ಲರ್ ಆಡಳಿತದ ಅಡಿಯಲ್ಲಿದ್ದೇವೆ. ಅಲ್ಲದೇ ನಮಗೆ ಪ್ರತಿಭಟಿಸುವ ಹಕ್ಕನ್ನು ನೀಡುತ್ತಿಲ್ಲ. ನಮ್ಮ ಸ್ವಾತಂತ್ರ್ಯವನ್ನು ನಿಗ್ರಹಿಸಲು ಸರ್ಕಾರ ಪ್ರಯತ್ನಿಸುತ್ತಿದ್ದು, ನಮ್ಮ ಪ್ರಜಾಪ್ರಭುತ್ವ ಹಕ್ಕುಗಳನ್ನು ನಮ್ಮೆಲ್ಲರಿಂದ ಕಿತ್ತುಕೊಳ್ಳುತ್ತಿದೆ ಎಂದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಪ್ರಖ್ಯಾತ್ ಶೆಟ್ಟಿ, ರಮೇಶ್ ಕಾಂಚನ್, ಮಹಿಳಾ ಕಾಂಗ್ರೆಸ್ ವಿಭಾಗದ ಜಿಲ್ಲಾಧ್ಯಕ್ಷ ಗೀತಾ ವಾಗ್ಲೆ, ಹರೀಶ್ ಶೆಟ್ಟಿ ಪಾಂಗಾಳ, ವರೋನಿಕಾ ಕರ್ನೆಲಿಯೊ, ಯತೀಶ್ ಕರ್ಕೇರ, ಧರ್ಮಗುರು ಫಾ.ವಿಲಿಯಂ ಮಾರ್ಟಿಸ್, ಡಾ. ಸುಗಂಧಿ ಶೇಖರ್, ಪ್ರಶಾಂತ್ ಜತ್ತನ್ನ ಹಾಗೂ ಮತ್ತಿತರರು ಉಪಸ್ಥಿತರಿದ್ದರು.