ಉಡುಪಿ, ಅ. 02 (DaijiworldNews/SM): ರೌಡಿ ಶೀಟರ್ ಕಿಶನ್ ಹೆಗ್ಡೆ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ನಾಲ್ವರು ಆರೋಪಿಗಳನ್ನು ಸುರತ್ಕಲ್ ಬಳಿ ಉಡುಪಿ ಪೊಲೀಸರು ಅಕ್ಟೋಬರ್ ಎರಡರ ಶುಕ್ರವಾರದಂದು ಬಂಧಿಸಿದ್ದಾರೆ.

ಸಚಿನ್ ಡಿ ಅಮೀನ್(37), ಅಕ್ಷಯ್ ಶೆಟ್ಟಿಗಾರ್(26), ಚೇತನ್(23), ಸಂಜಿತ್ ಪ್ರಸಾದ್(19) ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ ಕೃತ್ಯಕ್ಕೆ ಬಳಸಿದ ಎರಡು ಕಾರುಗಳು, ಎರಡು ಬೈಕ್ ಗಳು ಹಾಗೂ ಮರಕಾಸ್ತ್ರಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಸೆ. 24ರಂದು ಹಿರಿಯಡ್ಕದಲ್ಲಿ ಹಾಡುಹಗಲೇ, ಕಿಶನ್ ಹೆಗ್ಡೆಯ ಕೊಲೆ ನಡೆದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ತಕ್ಷಣಕ್ಕೆ ನಾಲ್ವರನ್ನು ಬಂಧಿಸಲಾಗಿತ್ತು. ಪ್ರಮುಖ ಆರೋಪಿ ಮನೋಜ್ ಸೇರಿದಂತೆ ನಾಲ್ವರನ್ನು ಉಡುಪಿ ಪೊಲೀಸರು ಬಂಧಿಸಿದ್ದರು. ಇದೀಗ ಮತ್ತೆ ಕೃತ್ಯದಲ್ಲಿ ಭಾಗಿಯಾಗಿರುವ ನಾಲ್ವರ ಬಂಧನವಾಗಿದೆ.