ಬಂಟ್ವಾಳ, ಅ. 02 (DaijiworldNews/SM): ಉತ್ತರ ಪ್ರದೇಶದ ದಲಿತ ಯುವತಿಯ ಅತ್ಯಾಚಾರ ಹಾಗೂ ಕೊಲೆಯನ್ನು ತೀವ್ರವಾಗಿ ಖಂಡಿಸಿ ಹಾಗೂ ಅತ್ಯಾಚಾರಗೈದ ಆರೋಪಿಗಳಿಗೆ ಕಠಿಣ ಶಿಕ್ಷೆಗೆ ಒಳಪಡಿಸಬೇಕೆಂದು ಒತ್ತಾಯಿಸಿ ಬಿಸಿರೋಡಿನಲ್ಲಿ ಮೊಂಬತ್ತಿ ಜಾಥ ನಡೆಯಿತು.

ಯುವತಿಯ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿ ಮಾಜಿ ಸಚಿವ ಬಿ.ರಮಾನಾಥ ರೈ ನೇತ್ರತ್ವದಲ್ಲಿ ಕೈಕಂಬ ಪೊಳಲಿ ದ್ವಾರದಿಂದ ಬಿಸಿರೋಡು ವರೆಗೆ ಮೊಂಬತ್ತಿ ಜಾಥ ನಡೆಯಿತು.
ಮೊಂಬತ್ತಿ ಜಾಥದ ಬಳಿಕ ಘಟನೆಯನ್ನುದ್ದೇಶಿಸಿ ಮಾತನಾಡಿದ ಮಾಜಿ ಸಚಿವ ಬಿ.ರಮಾನಾಥ ರೈ ಅವರು, ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ ಸರ್ಕಾರ ಹೆಣ್ಮಕ್ಕಳ ರಕ್ಷಣೆ ಮಾಡದ ಸರಕಾರವಾಗಿದೆ. ಅದರಲ್ಲೂ ಪರಿಶಿಷ್ಟ ಜಾತಿಯ ಹೆಣ್ಮಕ್ಕಳ ರಕ್ಷಣೆ ಮಾಡಲು ಅಸಾಧ್ಯವಾದ ಸರ್ಕಾರ ರಾಜೀನಾಮೆ ನೀಡಿ ರಾಷ್ಟ್ರಪತಿ ಆಡಳಿತ ಜಾರಿಯಾಗಬೇಕು ಎಂದು ಅವರು ಒತ್ತಾಯಿಸಿದರು.
ಉತ್ತರ ಪ್ರದೇಶದ ತಪ್ಪು ಕ್ರಮಗಳ ಮೇಲೆ ಸೂಕ್ತವಾದ ಕ್ರಮಕೈಗೊಳ್ಳಬೇಕು. ಇಡೀ ದೇಶದಲ್ಲಿ ನಡೆಯುವ ಜೊತೆಗೆ ಪರಿಶಿಷ್ಟ ಜಾತಿಯ ಹೆಣ್ಮಕ್ಕಳ ಮೇಲೆ ನಡೆಯುವ ಅತ್ಯಾಚಾರ ಹಾಗೂ ಹತ್ಯೆಯನ್ನು ತಡೆಗಟ್ಟುವ ಕೆಲಸ ಕೇಂದ್ರ ಸರಕಾರ ಜವಾಬ್ದಾರಿ ವಹಸಿ ನಿರ್ವಹಿಸಿಬೇಕು ಎಂದರು.