ಕಾಸರಗೋಡು, ಅ. 03(DaijiworldNews/PY): ಜಿಲ್ಲೆಯಲ್ಲಿ ಶನಿವಾರ 257 ಮಂದಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 11,911ಕ್ಕೆ ಏರಿದೆ.

ಶನಿವಾರ ಕೊರೊನಾ ದೃಢಪಟ್ಟ 257 ಮಂದಿಯ ಪೈಕಿ 241 ಮಂದಿಗೆ ಪ್ರಾಥಮಿಕ ಸಂಪರ್ಕದಿಂದ ಸೋಂಕು ತಗುಲಿದೆ. ಇದರಲ್ಲಿ 6 ಮಂದಿ ಹೊರರಾಜ್ಯ 10 ಮಂದಿ ವಿದೇಶಗಳಿಂದ ಬಂದವರಿಗೆ ಸೋಂಕು ಪತ್ತೆಯಾಗಿದೆ.
ಏತನ್ಮಧ್ಯೆ ಜಿಲ್ಲೆಯಲ್ಲಿ 130 ಮಂದಿ ಗುಣಮುಖರಾಗಿದ್ದು, ಒಟ್ಟು 8545 ಮಂದಿ ಗುಣಮುಖರಾಗಿದ್ದಾರೆ. ಇನ್ನು ಕೊರೊನಾದಿಂದ 94 ಮಂದಿ ಸಾವನ್ನಪ್ಪಿದ್ದಾರೆ.
ಇನ್ನು 3352 ಮಂದಿ ಸದ್ಯ ಚಿಕಿತ್ಸೆ ಪಡೆಯುತ್ತಿದ್ದು, 4607 ಮಂದಿ ನಿಗಾದಲ್ಲಿದ್ದಾರೆ. 1267 ಮಂದಿ ಐಸೋಲೇಷನ್ ವಾರ್ಡ್ನಲ್ಲಿದ್ದಾರೆ.
ಒಟ್ಟು 10,648 ಮಂದಿಗೆ ಪ್ರಾಥಮಿಕ ಸಂಪರ್ಕದಿಂದ ಸೋಂಕು ದೃಢಪಟ್ಟಿದ್ದು, ಈ ಪೈಕಿ 755 ಮಂದಿ ಹೊರರಾಜ್ಯ ಹಾಗೂ 588 ಮಂದಿ ವಿದೇಶಗಳಿಂದ ಬಂದವರಾಗಿದ್ದಾರೆ.