ಉಡುಪಿ, ಅ. 04(DaijiworldNews/PY): ಗಾಂಧಿ ಜಯಂತಿ ಪ್ರಯುಕ್ತ ಗಿರಿಜಾ ಸರ್ಜಿಕಲ್ ಮತ್ತು ಹೆಲ್ತ್ ಕೇರ್ ಸೆಂಟರ್ ಇವರ ಪ್ರಾಯೋಜಕತ್ವದಲ್ಲಿ ಇಂಡಿಯನ್ ಸೀನಿಯರ್ ಚೇಂಬರ್ ಉಡುಪಿ ಟೆಂಪಲ್ ಸಿಟಿ ಲೀಜನ್ ಇದರ ಸಹಯೋಗದೊಂದಿಗೆ ಉಡುಪಿ ತಾಲೂಕಿನ ಆಟೋ ಚಾಲಕರಿಗೆ ಉಚಿತ ಮಾಸ್ಕ್ ಹಾಗೂ ಸ್ಯಾನಿಟೈಸರ್ ವಿತರಿಸಲಾಯಿತು.



















ಶಂಕರಪುರದಲ್ಲಿ ಹಿರಿಯ ಉದ್ಯಮಿ ರೋ.ಆಂಟೋನಿ ಡೇಸಾ ಅವರು ಗಾಂಧಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ನಂತರ ಉಡುಪಿ ತಾಲೂಕಿನ ಸುಮಾರು 4500 ಆಟೋ ಚಾಲಕರಿಗೆ ಉಚಿತ ಮಾಸ್ಕ್ ಹಾಗೂ ಸ್ಯಾನಿಟೈಸರ್ ವಿತರಿಸಲಾಯಿತು. ಈ ಸಂಧರ್ಭದಲ್ಲಿ ಗಿರಿಜಾ ಸರ್ಜಿಕಲ್ ಮತ್ತು ಹೆಲ್ತ್ ಕೇರ್ ಸೆಂಟರ್ ಇದರ ಮಾಲಕ ರವೀಂದ್ರ ಶೆಟ್ಟಿ, ಇಂಡಿಯನ್ ಸೀನಿಯರ್ ಚೇಂಬರ್ ಉಡುಪಿ ಟೆಂಪಲ್ ಸಿಟಿ ಲೀಜನ್ ಇದರ ಅಧ್ಯಕ್ಷ ಸೀನಿಯರ್ ಪ್ರಮೋದ್ ಕುಮಾರ್, ರಾಷ್ಟ್ರೀಯ ಅಧಿಕಾರಿ ಸೀನಿಯರ್. ಚಿತ್ರ ಕುಮಾರ್, ನಿಕಟ ಪೂರ್ವ ಅಧ್ಯಕ್ಷ ಸೀನಿಯರ್. ವಿಜಯಕುಮಾರ್ ಉದ್ಯಾವರ, ಪೂರ್ವಾಧ್ಯಕ್ಷ ಸೀನಿಯರ್. ನವೀನ್ ಅಮೀನ್ ಕಾರ್ಯದರ್ಶಿ ಸೀನಿಯರ್ ಎನ್.ಜಿ.ಸುಕುಮಾರ್, ಕೋಶಾಧಿಕಾರಿ ಸೀನಿಯರ್ ಆಲ್ವಿನ್ ಮಿನೇಜಸ್ ಹಾಗೂ ಎಲ್ಲಾ ಸದಸ್ಯರು ಭಾಗವಹಿಸಿದ್ದರು.