ಕಾಸರಗೋಡು, ಅ. 04(DaijiworldNews/PY): ಜಿಲ್ಲೆಯಲ್ಲಿ ಆದಿತ್ಯವಾರ 278 ಮಂದಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 12,269ಕ್ಕೆ ಏರಿಕೆಯಾಗಿದೆ.

ಇಂದು ದೃಢಪಟ್ಟ 278 ಮಂದಿಯ ಪೈಕಿ 271 ಮಂದಿಗೆ ಪ್ರಾಥಮಿಕ ಸಂಪರ್ಕದಿಂದ ಸೋಂಕು ಪತ್ತೆಯಾಗಿದ್ದು, ಹೊರರಾಜ್ಯದಿಂದ ಬಂದ 4 ಮಂದಿಗೆ ಹಾಗೂ ವಿದೇಶದಿಂದ ಬಂದ 3 ಮಂದಿ ಸೋಂಕಿಗೆ ಒಳಗಾಗಿದ್ದಾರೆ. ಇದರಲ್ಲಿ ಓರ್ವ ಆರೊಗ್ಯ ಸಿಬ್ಬಂದಿಗೂ ಕೊರೊನಾ ದೃಢಪಟ್ಟಿದೆ.
ಈ ನಡುವೆ ಸೋಂಕಿನಿಂದ 193 ಮಂದಿ ಗುಣಮುಖರಾಗಿದ್ದು, ಒಟ್ಟು 8734 ಮಂದಿ ಗುಣಮುಖರಾಗಿದ್ದಾರೆ. ಇನ್ನು 4607 ಮಂದಿ ನಿಗಾದಲ್ಲಿದ್ದಾರೆ.