ಉಡುಪಿ, ಅ.5 (DaijiworldNews/HR): ಉಡುಪಿ ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಪ್ರೀತಿ ಗೆಹ್ಲೋಟ್ ಅವರನ್ನು ವರ್ಗಾಯಿಸಲಾಗಿದ್ದು, ಅವರ ಸ್ಥಾನಕ್ಕೆ ಡಾ.ನವೀನ್ ಭಟ್ ವೈ ಅವರನ್ನು ನೇಮಿಸಲಾಗಿದೆ.

ಅಕ್ಟೋಬರ್ 4 ರಂದು ರಾಜ್ಯ ಸರ್ಕಾರ ಈ ಆದೇಶ ಹೊರಡಿಸಿದೆ.
ಪ್ರೀತಿ ಗೆಹ್ಲೋಟ್ ಅವರು ಸೆಪ್ಟೆಂಬರ್ 2019 ರಲ್ಲಿ ಜಿ.ಪಂ ಸಿಇಒ ಆಗಿ ಅಧಿಕಾರ ವಹಿಸಿಕೊಂಡಿದ್ದರು.
ಬಂಟ್ವಾಳ ಮೂಲದ ಡಾ.ನವೀನ್ ಭಟ್ ವೈ ಪ್ರಸ್ತುತ ಹಾಸನ ಉಪವಿಭಾಗದ ಸಹಾಯಕ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಡಾ.ಭಟ್ ಅವರು 2016 ರಲ್ಲಿ ನಡೆದ ಅಖಿಲ ಭಾರತ ಯುಪಿಎಸ್ಸಿ ನಾಗರಿಕ ಸೇವಾ ಪರೀಕ್ಷೆಯಲ್ಲಿ 37 ನೇ ರ್ಯಾಂಕ್ ಪಡೆದಿದ್ದರು.
ಡಾ.ನವೀನ್ ಭಟ್ ಮೂಡುಬಿದ್ರಿಯ ರೋಟರಿ ಇಂಗ್ಲಿಷ್ ಮಧ್ಯಮ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪೂರೈಸಿ ಬಳಿಕ ಶ್ರೀ ಸತ್ಯ ಸಾಯಿ ಲೋಕಾ ಸೇವಾ ಪ್ರೌಢ ಶಾಲೆ ಮತ್ತು ಪಿಯು ಶಿಕ್ಷಣವನ್ನುಶ್ರೀ ಸತ್ಯ ಸಾಯಿ ಲೋಕ ಸೇವಾ ಸಂಸ್ಥೆಯಲ್ಲಿ ಪೂರ್ಣಗೋಳಿಸಿದರು.
ಅವರು 2009 ರಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ (ಸಿಇಟಿ) ಪ್ರಥಮ ಸ್ಥಾನ ಪಡೆದ ವೈದ್ಯರಾಗಿದ್ದಾರೆ ಮತ್ತು ಬೆಂಗಳೂರು ವೈದ್ಯಕೀಯ ಕಾಲೇಜಿನಿಂದ ಎಂಬಿಬಿಎಸ್ ಕೋರ್ಸ್ ಅನ್ನು ಪೂರ್ಣಗೊಳಿಸಿದರು.