ಕಾರ್ಕಳ, ಅ.5 (DaijiworldNews/HR): ಕೊರೊನಾ ಸೋಂಕಿಗೆ ತುತ್ತಾಗಿದ್ದ ವ್ಯಕ್ತಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಮೃತದೇಹವನ್ನು ಹೊರತೆಗೆಯಲು ಅಧಿಕಾರಿಗಳಿಗೆ ಸಮಸ್ಯೆ ಎದುರಾಗಿತ್ತು. ಈ ಸಂದರ್ಭದಲ್ಲಿ ಕೊನೆಗೆ ಆಸಿಫ್ ಎಂಬ ಸಮಾಜ ಸೇವಕ ದೇಹವನ್ನು ಹೊರಗೆಯಲು ಮುಂದೆ ಬಂದಿದ್ದು ಆಪತ್ಬಾಂಧವರಾಗಿದ್ದಾರೆ.

ಕಾರ್ಕಳದ ಛಾಯಾಗ್ರಾಹಕ ಪ್ರಸನ್ನ (45) ಅವರು ಕೊರೊನಾ ಸೋಂಕಿಗೆ ತುತ್ತಾಗಿದ್ದು, ಅದರಿಂದ ಬೆಸತ್ತ ಅವರು ಶನಿವಾರ ಬೆಳಿಗ್ಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ಕುಟುಂಬ ಸದಸ್ಯರು, ಅಧಿಕಾರಿಗಳು, ತಹಶೀಲ್ದಾರ್ ಮುಂತಾದವರು ಬಾವಿಯ ಸುತ್ತಲೂ ಜಮಾಯಿಸಿದರು ಆದರೆ ಶವವನ್ನು ಬಾವಿಯಿಂದ ಮೇಲಕ್ಕೆತ್ತಲು ಯಾರೂ ಸಿದ್ಧರಿರಲಿಲ್ಲ. ಭಾನುವಾರ ಮಧ್ಯಾಹ್ನ, ತಹಶೀಲ್ದಾರ್, ಪುರಂದರ್ ಹೆಗ್ಡೆ, ಮುಲ್ಕಿ ಕಾರ್ನಾಡ್ನ ಸಮಾಜ ಸೇವಕ ಆಸಿಫ್ ಅವರಿಗೆ ಕರೆ ಮಾಡಿ ಕರೆಸಿಕೊಂಡಿದ್ದಾರೆ.
90 ನಿಮಿಷಗಳ ಪ್ರಯಾಣದ ನಂತರ ಆಸಿಫ್ ತಮ್ಮ ತಂಡದೊಂದಿಗೆ ಇಲ್ಲಿಗೆ ತಲುಪಿದ್ದು, ಅವರು ಬಾವಿಗೆ ಇಳಿದು, ದೇಹವನ್ನು ತನ್ನ ಕೈಯಿಂದ ಎಳೆದು, ಸೊಂಟದ ಸುತ್ತಲೂ ಹಗ್ಗವನ್ನು ಕಟ್ಟಿ, 15 ನಿಮಿಷಗಳಲ್ಲಿ ದೇಹವನ್ನು ಹೊರತೆಗೆದಿದ್ದಾರೆ. ದೇಹವನ್ನು ಬಾವಿಯಿಂದ ಹೊರ ತೆಗೆದ ಬಳಿಕ, ಆಸಿಫ್ ತನ್ನ ಮೇಲೆ ಸ್ಯಾನಿಟೈಸರ್ ಅನ್ನು ಸಿಂಪಡಿಸಿ ಸ್ನಾನ ಮಾಡಿಕೊಂಡಿದ್ದಾರೆ.
ಈ ಕುರಿತು ಮಾತನಾಡಿದ ಆಸಿಫ್, ''ಕಾರ್ಕಳ ತಹಶೀಲ್ದಾರ್ ನನಗೆ ಕರೆ ಮಾಡಿ ಕರೆಸಿಕೊಂಡಿದ್ದಾರೆ, ನಾನು ಬಾವಿಗಿಳಿದು ದೇಹವನ್ನು ಹೊರಗೆ ತಂದಿದ್ದೇನೆ. ಕೆಲವು ದಿನಗಳ ಹಿಂದೆ, ಮುಲ್ಕಿಯ ಒಬ್ಬ ಕೊರೊನಾ ಪಾಸಿಟಿವ್ ವ್ಯಕ್ತಿ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದು, ನಾನೇ ಬಾವಿಯಿಂದ ಇಳಿದು ದೇಹವನ್ನು ಹೊರಗೆ ತಂದಿದ್ದೇನೆ'' ಎಂದರು.
''ದೇಹವನ್ನು ಬಾವಿಯಿಂದ ಹೊರಗೆ ತರಲು ಯಾರೂ ಸಿದ್ಧರಿಲ್ಲದ ಕಾರಣ ಅವರು ಆಸಿಫ್ ಅವರನ್ನು ಕರೆ ಮಾಡಿ ಕರೆಸಿಕೊಂಡಿದ್ದೇವೆ'' ಎಂದು ಪುರಂದರ್ ಹೆಗ್ಡೆ ಹೇಳಿದ್ದಾರೆ. ''ಆಸಿಫ್ ಕರೆಗೆ ಸ್ಪಂದಿಸಿದರು ಮತ್ತು ಕೆಲಸಕ್ಕೆ ಹಾಜರಾಗಿದ್ದರು'' ಎಂದು ಅವರು ಹೇಳಿದರು. ''ಆಸಿಫ್ಗೆ ಸಹಾಯ ಮಾಡಲು ಇಲಾಖೆ ಸಿದ್ಧವಾಗಿದೆ'' ಎಂದು ಅವರು ಹೇಳಿದ್ದಾರೆ.