ಕಾಸರಗೋಡು, ಅ. 05 (DaijiworldNews/MB) : ಜಫ್ತಿ ಬೆದರಿಕೆ ಹಿನ್ನಲೆಯಲ್ಲಿ ಕೃಷಿಕರೋರ್ವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಪುತ್ತಿಗೆ ಸಮೀಪದ ಬಾಡೂರಿನಲ್ಲಿ ನಡೆದಿದೆ.

ಬಾಡೂರು ನಯಮೊಗರುವಿನ ದೂಮಣ್ಣ ರೈ (58) ಆತ್ಮಹತ್ಯೆ ಮಾಡಿಕೊಂಡವರು.
ಇವರು ಬ್ಯಾಂಕ್ಗಳಿಂದ 40 ಲಕ್ಷ ರೂ.ಗಳಷ್ಟು ಸಾಲ ಪಡೆದಿದ್ದರು. ಉತ್ತಮ ಕೃಷಿಕರಾಗಿದ್ದರು. ಬ್ಯಾಂಕ್ನಿಂದ ಸಾಲ ಪಡೆದು ಮಾಡಿದ ಕೃಷಿ ಪ್ರಕೃತಿ ವಿಕೋಪದಿಂದ ನಾಶವಾಗಿದ್ದು, ಲಭಿಸಿದ ಉತ್ಪನ್ನಗಳಿಗೆ ಸೂಕ್ತ ಬೆಲೆ ಲಭಿಸದ ಹಿನ್ನಲೆಯಲ್ಲಿ ಸಾಲವನ್ನು ಮರುಪಾವತಿಸದ ಹಿನ್ನಲೆಯಲ್ಲಿ ಬ್ಯಾಂಕ್ ಜಫ್ತಿ ನೋಟಿಸ್ ಕಳುಹಿಸಿತ್ತು. ಇದರಿಂದ ಮನನೊಂದು ಶುಕ್ರವಾರ ರಾತ್ರಿ ವಿಷ ಸೇವಿಸಿದ್ದರು. ಗಂಭೀರ ಸ್ಥಿತಿಯಲ್ಲಿ ಕಾಸರಗೋಡು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಆದಿತ್ಯವಾರ ರಾತ್ರಿ ಮೃತಪಟ್ಟಿದ್ದಾರೆ.