ಮಂಗಳೂರು, ಅ. 05 (DaijiworldNews/SM): ದ.ಕ. ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳ ಬಳಿಕ ಸೋಂಕಿತರ ಸಂಖ್ಯೆ ಸ್ವಲ್ಪ ಇಳಿಮುಖವಾಗಿದೆ. ಸೋಮವಾರದಂದು 245 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.

ಇನ್ನು ಜಿಲ್ಲೆಯಲ್ಲಿ ಗುಣಮುಖರಾಗುತ್ತಿರುವವರ ಸಂಖ್ಯೆ ಕೂಡ ಉತ್ತಮವಾಗಿದೆ. ಸೋಮವಾರದಂದು ಮತ್ತೆ 261 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
ದ.ಕ. ಜಿಲ್ಲೆಯ ಸೋಮವಾರದ ಕೊರೋನಾ ವರದಿ:
ಒಟ್ಟು ಪರೀಕ್ಷೆಗೆ ಒಳಪಟ್ಟವರು 171996 ಮಂದಿ
ಒಟ್ಟು ನೆಗೆಟಿವ್ ಪ್ರಕರಣಗಳು 147439
ಜಿಲ್ಲೆಯಲ್ಲಿ ಒಟ್ಟು ಪಾಸಿಟಿವ್ ಪ್ರಕರಣಗಳು-24557
ಇಂದಿನ ಒಟ್ಟು ಪಾಸಿಟಿವ್ ಪ್ರಕರಣಗಳು 245
ಇಂದು ಒಟ್ಟು ಗುಣಮುಖರಾದವರು 261 ಮಂದಿ
ಒಟ್ಟು ಗುಣಮುಖರಾದವರು 18404
ಜಿಲ್ಲೆಯಲ್ಲಿ ಇಂದು ಸೋಂಕಿಗೆ ಬಲಿಯಾದವರು 6
ಜಿಲ್ಲೆಯಲ್ಲಿ ಒಟ್ಟು ಕೊರೋನಾಗೆ ಬಲಿಯಾದವರು 574
ಜಿಲ್ಲೆಯಲ್ಲಿ ಸದ್ಯ ಚಿಕಿತ್ಸೆಯಲ್ಲಿರುವವರು-5579 ಮಂದಿ