ಕಾಸರಗೋಡು, ಅ. 06 (DaijiworldNews/MB) : ಸೋಮುವಾರ ಜಿಲ್ಲೆಯಲ್ಲಿ 207 ಮಂದಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.

189 ಮಂದಿಗೆ ಸಂಪರ್ಕದಿಂದ ಸೋಂಕು ತಗುಲಿದ್ದು ಐವರು ವಿದೇಶದಿಂದ, 13 ಮಂದಿ ಹೊರರಾಜ್ಯಗಳಿಂದ ಬಂದವರಾಗಿದ್ದಾರೆ. ಇಬ್ಬರು ಆರೋಗ್ಯ ಸಿಬಂದಿಗಳಿಗೆ ಸೋಂಕು ದೃಢಪಟ್ಟಿದೆ.
165 ಮಂದಿ ಗುಣಮುಖರಾಗಿದ್ದಾರೆ. 12,476 ಮಂದಿಗೆ ಈವರೆಗೆ ಸೋಂಕು ದೃಢಪಟ್ಟಿದೆ. 3467 ಮಂದಿ ಈಗ ಚಿಕಿತ್ಸೆ ಪಡೆಯುತ್ತಿದ್ದಾರೆ. 4588 ಮಂದಿ ನಿಗಾದಲ್ಲಿದ್ದಾರೆ.