ಕಾಪು, ಅ. 06 (DaijiworldNews/MB) : ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರವರ ಮನೆಗೆ ಸಿಬಿಐ ರೈಡ್ ಬಗ್ಗೆ ಮಾಜಿ ಸಚಿವರಾದ ವಿನಯ ಕುಮಾರ ಸೊರಕೆ ಖಂಡನೆ ವ್ಯಕ್ತಪಡಿಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿಕೆಶಿಯವರ ಮೇಲೆ ಸಿಬಿಐ ರೈಡ್ ಅತಿರೇಕದ ಪರಮಾವಧಿ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಡಳಿತ ಪಕ್ಷದವರಿಗೆ ಎಷ್ಟು ಅಧಿಕಾರವಿರುತ್ತದೋ ಅದೇ ರೀತಿಯಲ್ಲಿ ವಿರೋಧ ಪಕ್ಷದ ಅಷ್ಟೇ ಅಧಿಕಾರವಿದೆ. ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರವರ ಮೇಲೆ ಇಡಿ ಮತ್ತು ಐಟಿ ರೈಡ್ ಮಾಡಿ ಇದೀಗ ಸಿಬಿಐ ರೈಡ್ ಬಗ್ಗೆ ಮಾಡಿ ಮುಂಬರುವ ಉಪಚುನಾವಣೆ, ಗ್ರಾಮ ಪಂಚಾಯತ್ ಚುನಾವಣೆ ಅಡ್ಡಿ ಆತಂಕ ತಂದಿಡಲು, ವಿರೋಧ ಪಕ್ಷದವರ ಬಾಯಿ ಮುಚ್ಚಿಸುವ ಕೆಲಸ ಕೇಂದ್ರ ಸರ್ಕಾರ ಮಾಡುತ್ತಿದೆ ಎಂದು ಆರೋಪಿಸಿದರು.
ಈಗ ಆ ಕೇಸ್ ನ್ಯಾಯಾಲಯದಲ್ಲಿದ್ದು, ಅಲ್ಲಿ ತೀರ್ಮಾನ ಆಗಲಿ. ಅದನ್ನು ಬಿಟ್ಟು ಮುಂದೆ ಬರುವ ಚುನಾವಣೆಯಲ್ಲಿ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ಇದು ಅತಿರೇಕದ ಪರಮಾವಧಿ. ಈ ದೇಶದ ಪ್ರಧಾನ ಮಂತ್ರಿಗಳು ಮತ್ತು ಗೃಹ ಸಚಿವರು ಅಘೋಷಿತ ತುರ್ತುಪರಿಸ್ಥಿತಿ ಇರುವಂತೆ ವರ್ತನೆ ಮಾಡುತ್ತಿದ್ದಾರೆ. ನ್ಯಾಯಾಲಯದಲ್ಲಿ ಕೆಲಸಕ್ಕೆ ಬೆಲೆ ಕೊಟ್ಟು, ಕಾಂಗ್ರೆಸ್ ನಾಯಕರ ಮೇಲಾಗುತ್ತಿರುವ ದೌರ್ಜನ್ಯವನ್ನು ತಕ್ಷಣ ನಿಲ್ಲಿಸಬೇಕು ಎಂದು ಕಾಪು ಮಾಜಿ ಶಾಸಕ ವಿನಯ್ ಕುಮಾರ್ ಸೊರಕೆ ಒತ್ತಾಯಿಸಿದ್ದಾರೆ.