ಕಾಸರಗೋಡು, ಅ. 06 (DaijiworldNews/HR): ಜಿಲ್ಲೆಯಲ್ಲಿ ಮಂಗಳವಾರ 416 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

398 ಮಂದಿಗೆ ಸಂಪರ್ಕದಿಂದ ಸೋಂಕು ತಗಲಿದ್ದು, ವಿದೇಶದಿಂದ ಬಂದ 12, ಹೊರ ರಾಜ್ಯಗಳಿಂದ ಬಂದ 6 ಮಂದಿಗೆ ಸೋಂಕು ದೃಢಪಟ್ಟಿದೆ.
ಇನ್ನು ಐವರು ಆರೋಗ್ಯ ಸಿಬಂದಿಗಳಿಗೂ ಸೋಂಕು ಪತ್ತೆಯಾಗಿದ್ದು, 12892 ಮಂದಿಗೆ ಈ ತನಕ ಸೋಂಕು ತಗಲಿದ್ದು , 3698 ಮಂದಿ ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ. 4546 ಮಂದಿ ನಿಗಾದಲ್ಲಿದ್ದಾರೆ.