ಮಂಗಳೂರು, ಅ.07 (DaijiworldNews/HR): ನಿಲ್ಲಿಸಿದ್ದ ಲಾರಿಗೆ ರಿಕ್ಷಾ ಡಿಕ್ಕಿ ಹೊಡೆದ ಪರಿಣಾಮ, ಚಾಲಕ ಸಾವನ್ನಪ್ಪಿ, ಮೂವರು ಪ್ರಯಾಣಿಕರು ಗಾಯಗೊಂಡ ಘಟನೆ ಮರೋಳಿಯಲ್ಲಿ ನಡೆದಿದೆ.







ಮೃತ ರಿಕ್ಷಾ ಚಾಲಕನನ್ನು ಸಲೀಮ್ (40) ಮತ್ತು ಗಾಯಗೊಂಡವರನ್ನು ನಿಜಾಮುದ್ದೀನ್ ಮತ್ತು ಸಿಯಾಬ್ ಎಂದು ಗುರುತಿಸಲಾಗಿದೆ.
ಆಟೋದಲ್ಲಿ ರಾತ್ರಿ ಮಲ್ಪೆ ದಕ್ಕೆಗೆ ಹೋಗಿ ವಾಪಾಸ್ ಬರುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಇನ್ನು ಈ ಲಾರಿಯೂ ಹಲವಾರು ವರ್ಷಗಳಿಂದ ಇದೇ ಸ್ಥಳದಲ್ಲೇ ನಿಲ್ಲಿಸಲಾಗಿದೆ ಎಂದು ಹೇಳಲಾಗಿದೆ.