ಬಂಟ್ವಾಳ, ಅ.07 (DaijiworldNews/HR): ಕೆಲಸದಲ್ಲಿ ನಿರತರಾಗಿದ್ದ ಕಾರ್ಮಿಕರ ತಲೆಗೆ ಕಲ್ಲು ಬಿದ್ದು ಪ್ರಾಣ ಕಳೆದುಕೊಂಡ ಘಟನೆ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಸಿದ್ದಕಟ್ಟೆಯಲ್ಲಿ ನಡೆದಿದೆ.




ಸಿದ್ದಕಟ್ಟೆಯ ಮಂಚಕಲ್ ಮೂಲದ ರಾಮಾನಂದ ಗೌಡ (30) ಮೃತ ವ್ಯಕ್ತಿ.
ಸಿದ್ದಕಟ್ಟೆ ಬಳಿಯ ಸಂಗಬೆಟ್ಟುವಿನಲ್ಲಿ ಹೊಸ ಮನೆ ನಿರ್ಮಾಣದ ಸಂದರ್ಭದಲ್ಲಿ ರಾಮಾನಂದ ಗೌಡ ಕಲ್ಲು ಕೆಲಸ ಮಾಡುತ್ತಿದ್ದರು. ಇದ್ದಕ್ಕಿದ್ದಂತೆ ಒಂದು ಕಲ್ಲು ಕೆಳಗೆ ಬಿದ್ದು, ರಮಾನಂದ ಅವರ ತಲೆಬುರುಡೆಗೆ ತೀವ್ರ ಗಾಯವಾಯಿತು. ಅವರು ಸ್ಥಳದಲ್ಲೇ ಮೃತಪಟ್ಟರು. ಈ ಮನೆ ನಿರ್ಮಾಣಕ್ಕಾಗಿ ಮೂವರು ಕಾರ್ಮಿಕರು ಕೆಲಸ ಮಾಡುತ್ತಿದ್ದರು.
ಬಂಟ್ವಾಳ ಗ್ರಾಮೀಣ ಪೊಲೀಸ್ ಸಬ್ ಇನ್ಸ್ಪೆಕ್ಟರ್, ಪ್ರಸನ್ನ ಮತ್ತು ಇತರ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ.