ಪುತ್ತೂರು, ಅ. 07 (DaijiworldNews/MB) : ಉತ್ತರ ಪ್ರದೇಶದ ಹತ್ರಸ್ನಲ್ಲಿ ನಡೆದಿರುವ ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ಖಂಡಿಸಿ ಎಸ್ಡಿಪಿಐ ಮುಖಂಡರೊಬ್ಬರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದು ಇನ್ನೊಂದೆಡೆ ದಲಿತ ಮಹಿಳೆಗೆ ಕಿರುಕುಳ ನೀಡಿದ ಆರೋಪದ ಮೇಲೆ ಅವರ ಮಗನನ್ನು ಬಂಧಿಸಲಾಗಿರುವ ಘಟನೆ ಪುತ್ತೂರಿನಲ್ಲಿ ನಡೆದಿದೆ.

ಬಂಧಿತ ವ್ಯಕ್ತಿ ಮೊಹಮ್ಮದ್ ಫೈಝಲ್ ಪುತ್ತೂರು ತಾಲೂಕಿನ ಚಿಕ್ಕಮುಡ್ನೂರು ಗ್ರಾಮದ ನಿವಾಸಿ. ಅಕ್ಟೋಬರ್ 6 ರ ಮಂಗಳವಾರ ಫೈಝಲ್ನನ್ನು ಆಂಧ್ರಪ್ರದೇಶ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಫೈಜಾಲ್ ಆಂಧ್ರಪ್ರದೇಶದ ಮಹಿಳೆಯನ್ನು ಇನ್ಸ್ಟಾಗ್ರಾಮ್ ಮೂಲಕ ಪರಿಚಯಿಸಿಕೊಂಡಿದ್ದಾನೆ. ಇವರಿಬ್ಬರ ನಡುವಿನ ಪರಿಚಯವು ಪ್ರೇಮ ಸಂಬಂಧವಾಗಿ ಮಾರ್ಪಟ್ಟು ದೈಹಿಕ ಸಂಬಂಧವೂ ಇದೆ ಎಂದು ಹೇಳಲಾಗಿದೆ. ಯುವಕ ಮಹಿಳೆಯ ಭಾವಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ.
ಈ ಕಿರುಕುಳದ ಬಗ್ಗೆ ಮಹಿಳೆ ತನ್ನ ರಾಜ್ಯದ ಪೊಲೀಸರಿಗೆ ದೂರು ನೀಡಿದ್ದಾಳೆ. ಮಂಗಳವಾರ ಪುತ್ತೂರಿಗೆ ಭೇಟಿ ನೀಡಿದ ಆಂಧ್ರ ಪೊಲೀಸರು ಫೈಜಾಲ್ನ್ನು ವಶಕ್ಕೆ ಪಡೆದಿದ್ದಾರೆ. ಅವರ ತಂದೆ ಅಬ್ದುಲ್ ಹಮೀದ್ ಸಾಲ್ಮರ ಎಸ್ಡಿಪಿಐ ನಾಯಕರಾಗಿದ್ದು ಹತ್ರಸ್ನಲ್ಲಿ ನಡೆದ ಸಾಮೂಹಿಕ ಅತ್ಯಾಚಾರವನ್ನು ಖಂಡಿಸಿ ಮಂಗಳವಾರ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಅತ್ತ ತಂದೆ ಮಹಿಳೆಯ ಮೇಲೆ ಅತ್ಯಾಚಾರ ನಡೆದ ವಿರುದ್ದ ಪ್ರತಿಭಟನೆ ನಡೆಸುವಾಗ ಇತ್ತ ಮಗ ಲೈಂಗಿಕ ಕಿರುಕುಳದ ಆರೋಪದಲ್ಲಿ ಬಂಧನವಾಗಿರುವುದು ತಂದೆಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ.