ಮಂಗಳೂರು, ಅ. 07 (DaijiworldNews/SM): ಮನೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿರುವ ಘಟನೆ ಕಣ್ಣೂರು ಅಡ್ಯಾರ್ ಕರ್ಮಾರಿನಲ್ಲಿ ನಡೆದಿದೆ. ಘಟನೆಯಲ್ಲಿ ಮನೆಯಲ್ಲಿದ್ದ ಬೈಕ್ ಶೆರಿದಂತೆ ವಿದ್ಯುತ್ ಉಪಕರಣಗಳು ಬೆಂಕಿಗಾಹುತಿಯಾಗಿದೆ.

ಮರಿಯಮ್ಮ ಅವರ ಮನೆಯಲ್ಲಿ ಈ ಅಗ್ನಿ ಆಕಸ್ಮಿಕ ಸಂಭವಿಸಿರುವಂತಹದು. ಮನೆಯಲ್ಲಿ ಯಾರೂ ಇಲ್ಲದ ವೇಳೆ ಘಟನೆ ನಡೆದಿದ್ದು, ಅಪಾಯ ತಪ್ಪಿದಂತಾಗಿದ್ದು, ಮನೆ ಮಂದಿ ಅನಾಹುತದಿಂದ ಪಾರಗಿದ್ದಾರೆ. ಲಕ್ಷಕ್ಕೂ ಅಧಿಕ ಮೌಲ್ಯದ ಸೊತ್ತುಗಳು ಬೆಂಕಿಗಾಹುತಿಯಾಗಿರುವ ಬಗ್ಗೆ ವರದಿಯಾಗಿದೆ.