ಕಾಸರಗೋಡು, ಅ.08 (DaijiworldNews/PY): ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನಲೆಯಲ್ಲಿ, ಬೀದಿ ಬದಿಯ ತಟ್ಟಿ ಹೊಟೇಲ್ಗಳಲ್ಲಿ ಇನ್ನು ಮುಂದೆ ಪಾರ್ಸೆಲ್ಗೆ ಮಾತ್ರ ಅವಕಾಶ ನೀಡಲಾಗಿದೆ. ಬೇಕರಿ ಜೊತೆ ಕಾರ್ಯಾಚರಿಸುವ ಜ್ಯೂಸ್, ಕಾಫಿ, ಚಹಾ ದ ಅಂಗಡಿಗಳನ್ನು ಸಂಜೆ 6 ಗಂಟೆಗೆ ಮುಚ್ಚಬೇಕು ಎಂದು ಜಿಲ್ಲಾಧಿಕಾರಿ ಡಾ. ಡಿ.ಸಜಿತ್ ಬಾಬು ಆದೇಶ ನೀಡಿದ್ದಾರೆ.

ಕೊರೊನಾ ಮಾನದಂಡದಂತೆ ಕಾರ್ಯಾಚರಿಸಬೇಕು. ಉಲ್ಲಂಘಿಸಿದ್ದಲ್ಲಿ ತಟ್ಟಿ ಹೊಟೇಲ್ಗಳ ವಿರುದ್ಧ ಕ್ರಮ ತೆಗೆದುಕೊಂಡು, ಈ ಹೊಟೇಲ್ಗಳನ್ನು ತೆರವುಗೊಳಿಸಲು ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.
ಬೀದಿ ಬದಿಯ ತಟ್ಟಿ ಹೊಟೇಲ್ಗಳನ್ನು ಬಿಟ್ಟು ಉಳಿದ ವ್ಯಾಪಾರ ಮಳಿಗೆಗಳು ರಾತ್ರಿ 9 ರ ತನಕ ಕಾರ್ಯಾಚರಿಸಬಹುದು ಎಂದು ಜಿಲ್ಲಾಧಿಕಾರಿ ಸಜಿತ್ ಬಾಬು ಹೆೇಳಿದ್ದಾರೆ.