ಮೂಡುಬಿದಿರೆ, ಅ. 08 (DaijiworldNews/SM): ಮಕ್ಕಳೊಂದಿಗೆ ಜಗಳ ವಾಡುತ್ತಿದ್ದುದಕ್ಕೆ ಬುದ್ದಿ ಮಾತು ಹೇಳಿದ ಕಾರಣ ಕೋಪಗೊಂಡು ಮಾನಸಿಕವಾಗಿ ನೊಂದ ಬಾಲಕಿಯೋರ್ವಳು ಆತ್ಮಹತ್ಯೆಗೆ ಶರಣಾದ ಮೂಡುಮಾರ್ನಾಡಿನ ಗುಡ್ಡದ ಮೇಲು ಎಂಬಲ್ಲಿ ಗುರುವಾರ ನಡೆದಿದೆ.

ಇಲ್ಲಿನ ಕರುಣಾಕರ ಹಾಗೂ ಸುಶೀಲಾ ದಂಪತಿಯ ಪುತ್ರಿ ಪೂಜಾ(13) ಆತ್ಮಹತ್ಯೆ ಮಾಡಿಕೊಂಡ ಬಾಲಕಿ. ಪೂಜಾಮಧ್ಯಾಹ್ನ ತನ್ನ ಸಂಬಂಧಿಕರ ಮಕ್ಕಳೊಂದಿಗೆ ಆಟವಾಡುತ್ತಾ ಅವರೊಂದಿಗೆ ಜಗಳವಾಡಿ ಹೊಡೆದು ತೊಂದರೆ ನೀಡುತ್ತಿದ್ದಳು.
ಸಣ್ಣ ಮಕ್ಕಳಿಗೆ ತೊಂದರೆ ಕೊಡಬಾರದು ಎಂದು ಸಹೋದರಿ ಬುದ್ಧಿ ಮಾತು ಹೇಳಿದ್ದಾರೆ. ಇದರಿಂದಾಗಿ ಖಿನ್ನತೆಗೆ ಒಳಗಾದ ಪೂಜಾ ಮನೆ ಬಳಿ ಇರುವ ಹಾಡಿಯಲ್ಲಿ ಮರದ ಕೊಂಬೆಗೆ ಚೂಡಿದಾರ ಶಾಲ್ ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಈ ಬಗ್ಗೆ ಮೂಡುಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.