ಕುಂದಾಪುರ, ಅ.09 (DaijiworldNews/HR): ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮಘರ್ಜನೆ ಉಡುಪಿ ಜಿಲ್ಲೆ, ಬಹುಜನ್ ಕ್ರಾಂತಿ ಮೋರ್ಚಾ ಉಡುಪಿ ಜಿಲ್ಲೆ ಹಾಗೂ ಮುಸ್ಲಿಂ ಮೋರ್ಚಾ ಉಡುಪಿ ಜಿಲ್ಲೆ ಇವರ ವತಿಯಿಂದ ಉತ್ತರ ಪ್ರದೇಶದಲ್ಲಿ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಖಂಡಿಸಿ ಗುರುವಾರದಂದು ಕುಂದಾಪುರ ಶಾಸ್ತ್ರೀ ವೃತ್ತದಲ್ಲಿ ಪ್ರತಿಭಟನೆ ನಡೆಯಿತು.






ಈ ಸಂದರ್ಭ ಮಾತನಾಡಿದ ಭೀಮ ಘರ್ಜನೆ ರಾಜ್ಯ ಸಂಚಾಲಕ ಉದಯ್ ಕುಮಾರ್ ತಲ್ಲೂರು ಮಾತನಾಡಿ, ರಾಜ್ಯ ಹಾಗೂ ಕೇಂದ್ರ ಸರಕಾರವನ್ನು ಆರ್.ಎಸ್.ಎಸ್. ನಿಯಂತ್ರಿಸುತ್ತಿದೆ. ದೇಶದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿಲ್ಲ. ದಲಿತರನ್ನು ಮತ್ತು ಅಲ್ಪಸಂಖ್ಯಾತರನ್ನು ತುಳಿಯುವ ಕೆಲಸವಾಗುತ್ತಿದೆ. ಹತ್ರಾಸ್ ಪ್ರಕರಣದಲ್ಲಿ ಸಿಎಂ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರಪ್ರದೇಶ ಸರಕಾರದ ವಿಫಲತೆ ಎದ್ದು ಕಾಣುತ್ತಿದ್ದು ಯುವತಿಗೆ ನ್ಯಾಯ ಒದಗಿಸಿಕೊಡುವ ನಿಟ್ಟಿನಲ್ಲಿ ರಾಷ್ಟ್ರವ್ಯಾಪಿ ಹೋರಾಟ ನಡೆಯಲಿದೆ ಎಂದರು.
ಪ್ರತಿಭಟನೆಯಲ್ಲಿ ಸಂಘಟನೆಗಳ ಪ್ರಮುಖರಾದ ಮೊಹಮ್ಮದ್ ತೌಫಿಕ್, ಚಂದ್ರ ವಾಲ್ತೂರು, ಕೆ.ಎಸ್. ವಿಜಯ್, ಲಿಯಾಕತ್, ನಜೀರ್ ಅಹಮ್ಮದ್ ಬೆಳವಾಯಿ ಮೊದಲಾದವರಿದ್ದರು.