ಬಂಟ್ವಾಳ, ಅ.09 (DaijiworldNews/HR): ಬಂಟ್ವಾಳ ತಾಲೂಕು ಕೃಷಿ ಉತ್ಪನ್ನ ಸಹಕಾರಿ ಮಾರಟ ಸಂಘ ಇದರ ಅಧ್ಯಕ್ಷರಾಗಿ ಕೆ. ರವೀಂದ್ರ ಕಂಬಳಿ ಅವರು ಮುಂದಿನ ಐದು ವರ್ಷಗಳ ಅವಧಿಗೆ ಬಿಜೆಪಿ ಮತ್ತು ಸಹಕಾರ ಭಾರತಿ ಸಹಕಾರದೊಂದಿಗೆ ಅವಿರೋಧವಾಗಿ ಪುನರಾಯ್ಕೆಯಾಗಿದ್ದಾರೆ.



ಉಪಾಧ್ಯಕ್ಷೆಯಾಗಿ ಶಶಿಕಲಾ ಉಡುಪ ಅವರು ಆಯ್ಕೆಯಾಗಿದ್ದು, ನಿರ್ದೇಶಕರಾಗಿ ಬಿ.ಟಿ.ನಾರಾಯಣ ಭಟ್ ಪೆರಾಜೆ, ವೆಂಕಟೇಶ್ ನಾವಡ ಪೊಳಲಿ, ಸುಂದರ ಭಂಡಾರಿ ರಾಯಿ, ಉಮೇಶ್ ಪೂಜಾರಿ ಪಿಲಾತಬೆಟ್ಟು, ರೋಹಿನಾಥ್ ಕಜೆಕಾರ್, ಜ್ಞಾನೇಶ್ವರ ಪ್ರಭು ಪಾಣೆಮಂಗಳೂರು, ವೆಂಕಟೇಶ ಪ್ರಭು ಕಲ್ಲಡ್ಕ, ಮನೋರಾಜ್ ಪೆರುವಾಯಿ, ರಾಮನಾಯ್ಕ್, ಪೂವಪ್ಪ ಮುಲ್ಕಾಜೆ ಮಾಡ, ರತ್ನಾವತಿ ಅಮ್ಟೂರು, ಪದ್ಮನಾಭ ಕಿದೆಬೆಟ್ಟು, ರಾಜೇಶ್ ಶೆಟ್ಟಿ ಸಿದ್ದಕಟ್ಟೆ ಅವರು ಆಯ್ಕೆಯಾದರು.
ಚುನಾವಣಾಧಿಕಾರಿಯಾಗಿ ಸಹಾಯಕ ಉಪನಿಭಂಧಕ ಸುದೀರ್ ಮಂಗಳೂರು ಆಗಮಿಸಿ ಚುನಾವಣಾ ಪ್ರಕ್ರಿಯೆ ನಡೆಸಿದರು.