ಮಂಗಳೂರು, ಅ. 09(DaijiworldNews/PY): ಜಿಲ್ಲೆಯ ಡೆಪ್ಯುಟಿ ಕಮಿಷನರ್ ಆಫ್ ಎಕ್ಸೈಜ್ ಇವರ ನಿರ್ದೇಶನದಂತೆ ಗಾಂಜಾ ಸೇವನೆ ಮಾಡುತ್ತಿದ್ದ ಆರು ಮಂದಿಯನ್ನು ಮಂಗಳೂರಿನ ಅಬಕಾರಿ ಅಧಿಕಾರಿಗಳು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸಾಂದರ್ಭಿಕ ಚಿತ್ರ
ಅಲನ್, ವಿವೇಕ್, ಅಮೃತಾ ವಾಸ್, ಸಚಿನ್, ರೋಹನ್ ಹಾಗೂ ನಭಾ ಬಂಧಿತ ಆರೋಪಿಗಳು.
ಡೆಪ್ಯುಟಿ ಕಮೀಷನರ್ ಆಫ್ ಎಕ್ಸೈಜ್ ಅವರ ನಿರ್ದೇಶನದಂತೆ ಅಬಕಾರಿ ಅಧೀಕ್ಷಕರು ಹಾಗೂ ಅಬಕಾರಿ ಉಪ ಅಧೀಕ್ಷಕರ ರ್ಮಾದರ್ಶನದ ಮೇರೆಗೆ ಅ.8ರ ಗುರುವಾರದಂದು ಮಂಗಳೂರು ವಲಯ ಕಚೇರಿಯ ಅಬಕಾರಿ ವಲಯ ನಿರೀಕ್ಷಕ ಸೀಮಾ, ಅಬಕಾರಿ ಉಪ ನಿರೀಕ್ಷರಾದ ಪ್ರತಿಭಾ.ಜಿ, ಕಮಲಾ ಹೆಚ್.ಎನ್ ಹಾಗೂ ಸಿಬ್ಬಂದಿಗಳಾದ ಸಂತೋಷ್ ಕುಮಾರ್, ಸುನಿಲ್ ಬೈಂದೂರ್, ಉಮೇಶ್. ಹೆಚ್, ಕುಮಾರ್, ವಿನೀತ್ ಸಂದೀಪ್ ಕುಮಾರ್ ಹಾಗೂ ಮನ್ಮೋಹನ್ ಅವರಿದ್ದ ತಂಡವು ಮಂಗಳೂರು ದಕ್ಷಿಣ ವಲಯ -1ರ ವ್ಯಾಪ್ತಿಯ ವಿವಿಧ ಪ್ರದೇಶಗಳಲ್ಲಿ ದಾಳಿ ನಡೆಸಿದ್ದಾರೆ.
ಬಂಧಿತರಿಂದ ಒಟ್ಟು ಸುಮಾರು 1.50 ಗ್ರಾಂ ಎಂಡಿಎಂಎ ಡ್ರಗ್ಸ್, 100 ಗ್ರಾಂ ಗಾಂಜಾ ಹಾಗೂ ಒಂದು ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳ ವಿರುದ್ದ ಒಟ್ಟು ಏಳು ಪ್ರಕರಣಗಳು ದಾಖಲಾಗಿದೆ.