ಬಂಟ್ವಾಳ, ಅ. 10 (DaijiworldNews/HR) : ಮೆಲ್ಕಾರ್ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಕಳೆದ ಐದು ವರ್ಷಗಳಿಂದ ಚಾಲಕರಾಗಿದ್ದ ಮಲ್ಲೇಶ್ ಬಡಿಗೆರೆ ಅವರು ಮಂಗಳೂರು ಕಾನೂನು ಹಿರಿಯ ಅಧಿಕಾರಿ ಕಚೇರಿಗೆ ಹಾಗೂ ಮೆಲ್ಕಾರ್ ಟ್ರಾಫಿಕ್ ಪೋಲೀಸ್ ಠಾಣೆಯಲ್ಲಿ ಪಿ.ಸಿ.ಯಾಗಿ ಕರ್ತವ್ಯ ನಿರ್ವಹಿಸಿದ ಶರೀಫ್ ಇದೀಗ ಬೆಳ್ತಂಗಡಿ ಠಾಣೆಗೆ ವರ್ಗಾವಣೆ ಗೊಂಡ ಹಿನ್ನೆಲೆಯಲ್ಲಿ ಅವರ ಬೀಳ್ಕೊಡುಗೆ ಕಾರ್ಯಕ್ರಮ ಕಾರ್ಯಕ್ರಮ ಮೆಲ್ಕಾರ್ ಟ್ರಾಫಿಕ್ ಪೋಲೀಸ್ ಠಾಣೆಯಲ್ಲಿ ನಡೆಯಿತು.

ಬೀಳ್ಕೊಡುಗೆ ಕಾರ್ಯಕ್ರಮ ಟ್ರಾಫಿಕ್ ಎಸ್.ಐ.ರಾಜೇಶ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಇನ್ನು ಇದೇ ಸಂದರ್ಭದಲ್ಲಿ ತೆರವಾದ ಚಾಲಕನ ಸ್ಥಾನಕ್ಕೆ ಚಾಲಕನಾಗಿ ಆಗಮಿಸಿದ ಚಂದ್ರ ನಾಯ್ಕ್ ಅವರಿಗೆ ಸ್ವಾಗತ ನೀಡಲಾಯಿತು.